Advertisement

ಎಪಿಎಂಸಿ ಸಮಸ್ಯೆ ಸಂಪುಟ ಸಭೆಯಲ್ಲಿ ಚರ್ಚೆ

12:02 PM Jun 21, 2020 | Suhan S |

ಹುಬ್ಬಳ್ಳಿ: ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎಪಿಎಂಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ ಹೇಳಿದರು.

Advertisement

ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಪಿಎಂಸಿ ವರ್ತಕರ ಸಮಸ್ಯೆ ಆಲಿಸಿ ಅವರು ಮಾತನಾಡಿದರು. ಎಪಿಎಂಸಿಗಳಲ್ಲಿ ಹಲವಾರು ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಶೇ.1.5 ಸೆಸ್‌ ಹಿಂಪಡೆಯುವ ಕುರಿತು ಹಲವು ವರ್ತಕರು ಮನವಿ ಮಾಡಿದ್ದಾರೆ. ಸಂಬಂಧಿತ ಸಚಿವರೊಂದಿಗೆ ಚರ್ಚಿಸಿ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಎಪಿಎಂಸಿಯಲ್ಲಿ 2008-09ರಿಂದ ವರ್ತಕರು ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. 2008ಕ್ಕಿಂತ ಹಿಂದಿನ ಕರ ಮನ್ನಾ ಮಾಡಲು ಕೃಷಿ ಮಾರುಕಟ್ಟೆ ಸಚಿವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಕೇಂದ್ರ ಸರಕಾರದ ಸೂಚನೆಯಂತೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ವರ್ತಕರು ಹಾಗೂ ರೈತರು ಗೊಂದಲಕ್ಕೀಡಾಗುವ ಅವಶ್ಯಕತೆಯಿಲ್ಲ. ವ್ಯಾಪಾರಿಗಳು ನಿಗದಿಪಡಿಸಿದ ಕಮಿಶನ್‌ ಪಡೆದು ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಎಪಿಎಂಸಿ ಕಾರ್ಯದರ್ಶಿ ಬಿ. ರಾಜಣ್ಣ, ಹಿರಿಯ ವ್ಯಾಪಾರಸ್ಥ ಶಂಕ್ರಣ್ಣ ಮುನವಳ್ಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ, ಮೋಹನ ಸೋಳಂಕಿ, ರಾಜಣ್ಣ ಬತ್ಲಿ, ಗಂಗನಗೌಡ ಪಾಟೀಲ, ರಾಜು ಕುಂದಗೋಳ, ಶಿವಯೋಗಿ ಪೂಜಾರ, ಪ್ರಕಾಶ ಕುರಟ್ಟಿ, ಎ.ಎಸ್‌. ಬಾಳಿಕಾಯಿ, ರಾಜು ಮೆಣಸಿನಕಾಯಿ, ಬಸವರಾಜ ಅಂಗಡಿ, ಎ.ಆರ್‌. ನದಾಫ, ಸುರೇಶ ಓಸ್ತವಾಲ್‌ ಮೊದಲಾದವರಿದ್ದರು. ಇದಕ್ಕೂ ಮುನ್ನ ಸಚಿವ ಎಸ್‌.ಟಿ. ಸೋಮಶೇಖರ ಎಪಿಎಂಸಿ ಮುಖ್ಯದ್ವಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next