Advertisement

ಜಿಲ್ಲಾ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಮಾರ್ದನಿ

07:49 PM Apr 10, 2021 | Girisha |

ವಿಜಯಪುರ : ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಜಿಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಅ ಧಿಕಾರಿಗಳು ನಡೆಸಿರುವ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ ಹೀಗೆ ಹಗರಣ ವಿಷಯಗಳೇ ಹೆಚ್ಚು ಸದ್ದು ಮಾಡಿದವು.ಸಭೆಯಲ್ಲಿ ಕೃಷಿ ಇಲಾಖೆಯ ಅಕ್ರಮದ ಕುರಿತು ಮಾತನಾಡಿದ ಸದಸ್ಯ ಬಿ.ಆರ್‌ .ಯಂಟಮಾನ್‌, ಕನ್ನೊಳಿ ಗ್ರಾಮದಲ್ಲಿ ಅ ಧಿಕಾರಿಗಳ ಕಣ್ಗಾವಲಿನಲ್ಲೇ ಅಕ್ರಮ ಗೊಬ್ಬರ ತಯಾರಿಕೆ ಘಟಕ ನಡೆಯುತ್ತಿದೆ. ನಕಲಿ ಗೊಬ್ಬರ ಉತ್ಪಾದಿಸುವ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಅ ಧಿಕಾರಿಗಳು ಸಬೂಬು ಹೇಳುತ್ತಾರೆ. ಅಧಿಕಾರಿಗಳು ನಕಲಿ ಕೃಷಿ ಪರಿಕರ ಉತ್ಪಾದಕರೊಂದಿಗೆ ನೇರ ಶಾಮೀಲಿನಿಂದಾಗಿಯೇ ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹರಿಹಾಯ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿ  ಕಾರಿಗಳು, ಕನ್ನೋಳಿ ಪ್ರಕರಣದಲ್ಲಿ 21ದಿನಗಳವರೆಗೆ ಲೈಸೆನ್ಸ್‌ ಅಮಾನತು ಮಾಡಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಈ ವಿಷಯದಲ್ಲಿ ಅಧಿ ಕಾರಿಗಳು ಅಸಹಾಯಕರಾಗಿದ್ದಾರೆಯೇ ಹೊರತು ಬೇಜವಾಬ್ದಾರಿ ಮಾಡಿಲ್ಲ ಎಂದು ಸಮಜಾಯಿಸಿ ನೀಡಿದರು.

Advertisement

ಇನ್ನು ಜಿಲ್ಲೆಯಲ್ಲಿ ಅಕ್ಷರ ದಾಸೋಹ ಅ ಧಿಕಾರಿ ಎಸ್‌.ಎ. ಮುಜಾವರ ಇವರ ಪತಿ ಎಸ್‌.ಎಸ್‌. ಮುಜಾವರ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣಾಧಿ ಕಾರಿ ಆಗಿದ್ದಾರೆ. ಪತ್ನಿಯ ಪ್ರತಿ ಕೆಲಸದಲ್ಲೂ ಪತಿ ಮೂಗು ತೂರಿಸುತ್ತಿದ್ದಾರೆ. ಈ ಕುರಿತು ಕಳೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಹೀಗಾಗಿ ಕೈಗೊಂಡ ಕ್ರಮದ ಪಾಲನಾ ವರದಿ ನೀಡಿ ಎಂದು ಸದಸ್ಯೆ ಪ್ರತಿಭಾ ಪಾಟೀಲ ಪಟ್ಟು ಹಿಡಿದಾಗ, ಮಹಾಂತಗೌಡ ಬೆಂಬಲಕ್ಕೆ ನಿಂತರು. ಈ ಕುರಿತು ಸಭೆಯಲ್ಲಿ ಸದಸ್ಯರ ಆರೋಪ, ಅಧಿಕಾರಿಗಳ ನಿರಾಕರಣೆ ಬಳಿಕ ಸದರಿ ಪ್ರಕರಣದಲ್ಲಿ ಏಪ್ರಿಲ್‌ 16ರೊಳಗೆ ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸಭೆ ಸೂಚನೆ ನೀಡಿತು.

ಇನ್ನು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮಕ್ಕಳಿಗೆ ವಿತರಿಸಲು ಬಂದಿದ್ದ ಹಾಲಿನ ಪುಡಿ ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟಕ್ಕಾಗಿ ಬಾಗಲಕೋಟೆ ಜಿಲ್ಲೆಗೆ ಸಾಗಿಸಲಾಗಿದೆ. ಅಕ್ರಮವಾಗಿ ಹಾಲಿನ ಪುಡಿ ದಾಸ್ತಾನು ಮಾಡಿದ ಪ್ರಕರಣದಲ್ಲಿ ಅಧಿಕಾರಿಗಳು ಜೈಲಿಗೂ ಹೋಗಿ ಬಂದಿದ್ದಾರೆ. ಪರಿಸ್ಥಿತಿ ಹೀಗಾಗಿ ಜಿಲ್ಲೆಯಲ್ಲಿ ಮಕ್ಕಳ ಭವಿಷ್ಯ ರೂಪಿಸುವುದಾದರೂ ಹೇಗೆ ಎಂದು ಮಹಾಂತಗೌಡ ಆಕ್ಷೇಪಿಸಿದರು.

ಇಲ್ಲಿಂದ ಬಾಗಲಕೋಟೆ ಜಿಲ್ಲೆಗೆ ಅಕ್ರಮವಾಗಿ ಸಾಗಾಟವಾಗಿ, ಅಲ್ಲಿನ ಅಧಿ ಕಾರಿಗಳು ಹಾಲಿನ ಪುಡಿ ಅಕ್ರಮ ಬಯಲು ಮಾಡುವವರೆಗೆ ವಿಜಯಪುರ ಜಿಲ್ಲೆಯ ಅ ಧಿಕಾರಿಗಳು ನೇರ ಶಾಮೀಲಾಗಿರುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಕೂಡಲೇ ಸಂಬಂ ಧಿಸಿದ ಹಿರಿಯ ಅ ಧಿಕಾರಿಗಳನ್ನೇ ಕಡ್ಡಾಯ ರಜೆ ಮೇಲೆ ಕಳಿಸಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ ತಮ್ಮ ವರ್ತನೆ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ತಮ್ಮ ಸೇವೆಯನ್ನೇ ಬೇಡ ಎಂದು ಪಟ್ಟು ಹಿಡಿದರು. ಕಾರಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ರಾಜಕುಮಾರ ಯರಗಲ್‌ ಸಭೆಯಲ್ಲಿ ಕ್ಷಮೆ ಯಾಚಿಸಿದ ಘಟನೆಯೂ ಜರುಗಿತು. ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಿಒಒ ಗೋವಿಂದರಡ್ಡಿ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next