Advertisement

ಕಸದ ಲಾಭದ ಬಗ್ಗೆ ಕಾಂಪೋಸ್ಟ್‌ ಸಂತೆಯಲ್ಲಿ ಚರ್ಚೆ

11:20 AM Aug 13, 2017 | |

ಕೆ.ಆರ್‌.ಪುರ: “ಸ್ವಚ್ಚಗೃಹ’ ಹಾಗೂ ಬಿಬಿಎಂಪಿ ವತಿಯಿಂದ ಕೆಆರ್‌ಪುರದ ಹೊರಮಾವು ವಾರ್ಡ್‌ನ ಚೆಳಕೆರೆ ಗ್ರಾಮದಲ್ಲಿ ಶನಿವಾರ ಕಾಂಪೋಸ್ಟ್‌ ಸಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಕಾಂಪೋಸ್ಟ್‌ ಸಂತೆಯಲ್ಲಿ ಹೊರಮಾವು ಗ್ರಾಮದ ಸುತ್ತಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಪ್ರಾತ್ಯಕ್ಷಿಕೆಗಳ ಮೂಲಕ ಪ್ಲ್ಯಾಸ್ಟಿಕ್‌ ಬಳಸದಂತೆ ಹಾಗೂ ವಿಘಟನೆ ಹೊಂದಬಲ್ಲ ಪ್ಲ್ಯಾಸ್ಟಿಕ್‌ಗಳನ್ನು ಬಳಸುವಂತೆ ಜಾಗೃತಿ ಮೂಡಿಸಿದರು.

ತರಕಾರಿಗಳನ್ನು ಕಾಂಪೋಸ್ಟ್‌ ಗೊಬ್ಬರದಿಂದ ಬೆಳೆಯುವಂತೆ ಮನವಿ ಮಾಡಿದರು. ಸ್ತ್ರೀಯರಿಗೆ ಮರು ಬಳಕೆ ಮಾಡಬಲ್ಲ ಸ್ಯಾನಿಟರಿ ಪ್ಯಾಡ್‌ ಕುರಿತೂ ಸಹ ವಿವರಿಸಿದರು. ಹಸಿ ಕಸವನ್ನು ಗೊಬ್ಬರವಾಗಿ ಒಣಗಿಸಿ ಇತರೆ ಉದ್ದೇಶಗಳಿಗೂ ಬಳಸಬಹುದೆಂಬ ಪ್ರತ್ಯಕ್ಷಿಕೆ ನೀಡಿದರು. 

ಕರಗದ ಪ್ಲ್ಯಾಸ್ಟಿಕ್‌ ಮತ್ತು ಲೋಹದಿಂದ ಭೂ ಪಲವತ್ತತೆಯ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿ ಕಸ ವಿಂಗಡಣೆಯ ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಕಾಂಪೋಸ್ಟ್‌ ಸಂತೆಯಲ್ಲಿ ಭಾಗವಹಿಸಿದ್ದ ಶಾಸಕ ಬಿ.ಎ.ಬಸವರಾಜ್‌ ಮಾತನಾಡಿ, ಬೆಂಗಳೂರು ನಗರ ಮಾಹಿತಿ ಮತ್ತು ಜೈವಿಕ ತಂತ್ರಜಾnನದ ಮೂಲಕ ಉತ್ತುಂಗಕ್ಕೇರುತ್ತಿದೆ.

ಜನಸಂದಣಿ ಹೆಚ್ಚಿದಂತೆ ಕಸ ಉತ್ಪತ್ತಿಯೂ ಹೆಚ್ಚುತ್ತಿದೆ. ಒಣ ಮತ್ತು ಹಸಿ ಕಸಗಳೆರಡೂ ಪ್ರತ್ಯೇಕ ಪರಿಣಾಮ ಬೀರಲಿದ್ದು ಇವೆರಡರ ವಿಂಗಡಣೆ ಅಗತ್ಯವಿದೆ. ಹಸಿ ಕಸ ವಿಂಗಡಿಸಿ ಮನೆಗಳಲ್ಲೇ ಕಾಂಪೋಸ್ಟ್‌ ಗೊಬ್ಬರವಾಗಿಸಿ ಕೈತೋಟಗಳನ್ನು ಬೆಳೆಸಬೇಕಿದೆ. ನಗರದ ನಾಗರಿಕರಿಗೆ ಒಳ್ಳೆಯ ಆರೋಗ್ಯ ಉತ್ತಮ ವಾತಾವರಣ ಕಲ್ಪಿಸಲು ಸಂಘ ಸಂಸ್ಥೆಗಳು ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕಾಗಿದೆ.

Advertisement

ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕಸ ವಿಂಗಡಣೆ ಹಾಗೂ ಹಸಿ ಕಸವನ್ನು ಗೊಬ್ಬರವಾಗಿಸಿ, ಅವಕಾಶವಿದ್ದೆಡೆ ಕೈತೋಟ ಬೆಳೆಸುವ ಬಗ್ಗೆ ತಿಳಿಸಿಕೊಡಬೇಕಿದೆ. ಅ ಮೂಲಕ ಹಣ ಗಳಿಸುವ ಅವಕಶಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದರು. ಪಾಲಿಕೆ ಮತ್ತು ಸ್ವಚ್ಚಗೃಹ ಸ್ವಯಂ ಸೇವಾ ಸಂಸ್ಥೆಯು ಕೆಆರ್‌ಪುರ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಕಸ ವಿಂಗಡಿಸಿ, ಗೊಬ್ಬರ ತಯಾರಿಸುವ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮಿಕೊಳ್ಳುತ್ತಿರುವುದು ಅಭಿನಂದನೀಯ.

ನಗರವನ್ನು ಮತ್ತಷ್ಟು ಸ್ವಚ್ಚ ಮಾಡಲು ಜನರೂ ಸಹ ಸಹಕರಿಸಬೇಕಿದೆ ಎಂದರು. ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್‌, ಪಾಲಿಕೆ ಸದಸ್ಯೆ ರಾಧಮ್ಮ ವೆಂಕಟೇಶ್‌, ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಮುನೇಗೌಡ, ವಾರ್ಡ್‌ ಅಧ್ಯಕ್ಷ ನಾರಾಯಣ ಸ್ವಾಮಿ, ಚೆಳಕೆರೆ ರವಿ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next