Advertisement

ಕೂಲಿ ವಿತರಣೆಯಲ್ಲಿ ತಾರತಮ್ಯ-ಪ್ರತಿಭಟನೆ

03:12 PM Jun 07, 2022 | Team Udayavani |

ಗುಳೇದಗುಡ್ಡ: ಹಾನಾಪುರ ಪಂಚಾಯಿತಿಯ ಮುರುಡಿ ಗ್ರಾಮದಲ್ಲಿ ನರೇಗಾ ಕೂಲಿ ಕೆಲಸ ಮಾಡುವವರಿಗೆ ಕೂಲಿ ಹಣ ನೀಡುವಲ್ಲಿ ತಾರತಮ್ಯ ಮಾಡಿದ್ದನ್ನು ಖಂಡಿಸಿ 150ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಮುರುಡಿ ಗ್ರಾಮದಲ್ಲಿ ಕಳೆದ ವಾರ ಕೂಲಿ ಕೆಲಸಕ್ಕೆ ಕಾರ್ಮಿಕರು ತೆರಳಿದ್ದಾರೆ. ಎಲ್ಲ ಕಾರ್ಮಿಕರು ಆರು ದಿನಗಳ ಕೆಲಸ ಮಾಡಿದ್ದಾರೆ. ಆದರೆ, ಇದರಲ್ಲಿ ಕೆಲವರಿಗೆ ಕೆಲಸ ಮಾಡದೇ ಏಳು ದಿನಗಳ ವೇತನ ನೀಡಿದ್ದಾರೆ. ಹಾಗಾದರೆ ನಮಗೇಕೆ ಏಳು ದಿನದ ಕೂಲಿ ನೀಡಿಲ್ಲ ಎಂದು ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಂಗಪ್ಪ ಗೌಡ್ರ, ಹುಲಿಗೆವ್ವ ಮಾದರ ಮಾತನಾಡಿ, ಎಲ್ಲರು ಕಳೆದ ವಾರ ಕೂಲಿ ಕೆಲಸ ಮಾಡಲು ತೆರಳಿದ್ದೇವು. ನಮ್ಮ ಜತೆ ಇನ್ನೂ 150ಕ್ಕೂ ಹೆಚ್ಚಿನ ಜನರು ಬಂದಿದ್ದಾರೆ. ಎಲ್ಲರೂ ಆರು ದಿನಗಳ ಕೆಲಸ ಮಾಡಿದ್ದೇವೆ. ನಮಗೆ ಆರು ದಿನಗಳ ವೇತನ ಹಾಕಿದ್ದಾರೆ. ಆದರೆ ಅವರೆಲ್ಲರಿಗೂ ಏಳು ದಿನಗಳ ಕೂಲಿ ನೀಡಿದ್ದಾರೆ. ಗ್ರಾಮದಲ್ಲಿ ದೇವಿ ವಾರವಿದ್ದರೂ ಕೆಲಸಕ್ಕೆ ಹೋಗಿದ್ದೇವು. ಆದರೆ, ಗ್ರಾಮದಲ್ಲಿ ಮದುವೆ ಇದ್ದ ಕಾರಣ ಒಂದು ದಿನ ನಾವು ಹೋಗಿರಲಿಲ್ಲ. ಅದೇ ರೀತಿ ಅವರು ಸಹ ಹೋಗಿಲ್ಲ. ಆದರು ಅವರಿಗೆ ಹಣ ಹಾಕಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ನಮಗೂ ಅವರಂತೆ ಏಳು ದಿನಗಳ ಕೂಲಿ ಹಣ ಕೊಡಬೇಕು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಪಂಚಾಯಿತಿ ಯವರು ಸರಿಯಾಗಿ ಗಮನಿಸಬೇಕು. ನಮಗೆ ಇದರಲ್ಲಿ ಅನ್ಯಾಯವಾಗಿದೆ ಎಂದು ಪ್ರತಿಭಟನಾ ನಿರತ ಕೂಲಿ ಕಾರ್ಮಿಕರು ದೂರಿದ್ದಾರೆ.

ಸ್ಥಳಕ್ಕೆ ತಾಪಂ ಎಡಿಎಲ್‌ಆರ್‌ ರಾಮಚಂದ್ರ ಮೇತ್ರಿ ಭೇಟಿ ನೀಡಿ, ಪ್ರತಿಭಟನಾನಿರತರ ಮನವಿ ಆಲಿಸಿ, ದಾಖಲೆ ಪ್ರಕಾರ ಸದ್ಯ 7-8 ಜನರಿಗೆ ಏಳು ದಿನಗಳ ಹಾಜರಿ ಬಿದ್ದಿದ್ದು, ಇನ್ನೂ ಪರಿಶೀಲನೆ ಮಾಡಲಾಗುವುದು. ಏಳು ದಿನಗಳ ವೇತನ ಪಡೆದವರಿಗೆ ನೋಟಿಸ್‌ ನೀಡಿ, ಒಂದು ದಿನದ ಹೆಚ್ಚಿನ ಕೂಲಿ ಹಣ ವಾಪಸ್‌ ಪಡೆಯಲಾಗುವುದು. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗುವುದು ಎಂದು ಹೇಳಿದರು.

ನಿಂಗಪ್ಪ ಗೌಡ್ರ, ಲಕ್ಷ್ಮೀಬಾಯಿ ಕೋರಿ, ಗಂಗವ್ವ ದ್ಯಾಮನಗೌಡ್ರ, ಪಾರ್ವತಿ ಗೌಡ್ರ, ಯಲ್ಲವ್ವ ಕೋರಿ, ನೀಲವ್ವ ದ್ಯಾಮನಗೌಡ್ರ, ಕಮಲವ್ವ ಚುಂಗಿನ, ಮಲ್ಲವ್ವ ಹೂಲಗೇರಿ, ಮಾದೇವಿ ದಾಸರ, ಗೀತಾ ದಾಸರ, ಮಾರುತಿ ದಾಸರ, ದೇವಕ್ಕೆವ್ವ ಚುಂಗಿನ, ಶಿವವ್ವ ಕೆರಕಲಮಟ್ಟ, ಸಿದ್ದವ್ವ ದ್ಯಾಮನಗೌಡ್ರ, ಶಂಕ್ರವ್ವ ದಿಂಡಿ, ಲಕ್ಷ್ಮವ್ವ ಗೌಡರ, ಯಲ್ಲಪ್ಪ ಕೋರಿ, ಪರಸಪ್ಪ ಗೌಡ್ರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next