Advertisement

ಅನುದಾನ ಹಂಚಿಕೆಯಲ್ಲೂ ತಾರತಮ್ಯ

09:40 PM Mar 23, 2019 | Team Udayavani |

ಆಳಂದ: ತಾಲೂಕಿನ ಒಟ್ಟು 104 ಹಳ್ಳಿ 36 ತಾಂಡಾಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸದ್ಯ ಹಲವೆಡೆ ಭೀಕರ
ಪರಿಸ್ಥಿತಿ ಎದುರಾಗಿದ್ದರೆ, ಇನ್ನರ್ಧ ಹಳ್ಳಿಗಳಲ್ಲಿ ಸಮಸ್ಯೆ ಹೇಳತೀರದಂತಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಿದೆ.

Advertisement

ಮುಂಗಾರು ಮತ್ತು ಹಿಂಗಾರು ಮಳೆ ಸಕಾಲಕ್ಕೆ ಬಾರದೆ ಇರುವುದು, ನಿರೀಕ್ಷಿತ ಮಟ್ಟದಲ್ಲಿ ಅಂತರ್ಜಲ ಮಟ್ಟ ಸುಧಾರಿಸದೇ ಮತ್ತಷ್ಟು ಕುಸಿಯುತ್ತಿರುವುದು ಭೀಕರ ಜಲಕ್ಷಾಮಕ್ಕೆ ಕಾರಣವಾಗಿದೆ. ಇದರಿಂದ ಜನ-ಜಾನುವಾರುಗಳು ಪರದಾಡುವಂತೆ ಆಗಿದೆ. ಮತ್ತೂಂದೆಡೆ ರೈತರು ಜಾನುವಾರುಗಳಿಗೆ ಮೇವು ಸಂಗ್ರಹವಿಲ್ಲದೆ ಚಿಂತಾಕ್ರಾಂತರಾಗಿದ್ದಾರೆ. 

ಅನುದಾನ ಹಂಚಿಕೆ ತಾರತಮ್ಯ: ವಾಸ್ತವ್ಯದಲ್ಲಿ ಆಳಂದ ತಾಲೂಕು ಹಿಂಗಾರು ಹಾಗೂ ಮುಂಗಾರು ಮಳೆ, ಬೆಳೆ ಇಲ್ಲದೆ
ಜನ ನರಕಯಾತನೆ ಅನುಭವಿಸಿದ್ದಾರೆ. ಆದರೆ ಬರ ಅಧ್ಯಯನ ತಂಡಕ್ಕೆ ಸ್ಥಳೀಯ ಮಟ್ಟದ ಅಧಿಕಾರಿಗಳು ಮುಂಗಾರು ಕೈಬಿಟ್ಟು ಬರೀ ಹಿಂಗಾರು ಕುರಿತು ಬರ ಆವರಿಸಿದ ವರದಿ ನೀಡಿದ್ದರಿಂದ ಸರ್ಕಾರವು ಮುಂಗಾರಿನ ಪರಿಸ್ಥಿತಿ ಕೈಬಿಟ್ಟು ಹಿಂಗಾರಿಗೆ ಸೀಮಿತವಾಗಿ ನೀರಿನ ಪ್ರತಿಕಂತಿಗೆ 25ಲಕ್ಷ ರೂ. ಮಾತ್ರ ನೀಡತೊಡಗಿದೆ. 

ಹೀಗಾಗಿ ಬೆಳೆ ಪರಿಹಾರದಲ್ಲೂ ಅನ್ಯಾಯ ಎದುರಿಸುವಂತಾಗಿದೆ. ಆದರೆ ಮೇಲ್ಮಟ್ಟದ ಅಧಿಕಾರಿಗಳು ವಾಸ್ತವ್ಯ ವರದಿಯನ್ನಾಧರಿಸಿ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗದೆ ಹೋದರೆ ಜನ ರೊಚ್ಚಿಗೇಳುವುದು ನಿಶ್ಚಿತವಾಗಿದೆ. ಇಂಥ ಭೀಕರ ಪರಿಸ್ಥಿತಿ ಇಟ್ಟುಕೊಂಡು ಇದರ ನಿವಾರಣೆಗೆ ತಾಲೂಕು ಆಡಳಿತ ಅಂದಾಜಿನಂತೆ ತುರ್ತು ಕ್ರಮ ಕೈಗೊಳ್ಳಲು ಸಲ್ಲಿಸಿದ 3 ಕೋಟಿ ರೂ. ಅನುದಾನದ ಬೇಡಿಕೆಯಲ್ಲಿ 50 ಲಕ್ಷ ರೂ. ಮಾತ್ರ ನೀಡಿದ್ದು, ಬಾಕಿ ಅನುದಾನ ಬಿಡುಗಡೆಗಾದರೂ ರಾಜ್ಯ ಸರ್ಕಾರ ತಕ್ಷಣವೇ ಸ್ಪಂದಿಸುತ್ತದೆಯೇ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಸರ್ಕಾರ ಈಗಾಗಲೇ 3ನೇ ಕಂತಿನ ಹಣ ಸೇರಿ ಕೊಟ್ಟಿದ್ದು ಕೇವಲ 75 ಲಕ್ಷ ರೂ. ಮಾತ್ರ. ಹೀಗಾದರೆ ಯಾವ ಊರಿನ
ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಿದೆ ಎನ್ನುವ ಪ್ರಶ್ನೆ ಅಧಿಕಾರಿಗಳದ್ದಾಗಿದೆ. 

Advertisement

ಕನಿಷ್ಠ ಒಂದು ಹಳ್ಳಿಗೆ ಕೊಳವೆ ಬಾವಿ, ಪಂಪಸೆಟ್‌, ಪೈಪಲೈನ್‌ ಹೀಗೆ ಕನಿಷ್ಠ 1ರಿಂದ 2 ಲಕ್ಷ ರೂ. ವರೆಗೆ ಖರ್ಚು
ತಗಲುತ್ತದೆ. ಈಗಾಗಲೇ ಎರಡು ಕಂತಿನಲ್ಲಿ ಬಿಡುಗಡೆಯಾದ 50 ಲಕ್ಷ ರೂ. ವೆಚ್ಚದಲ್ಲಿ ಪೂರ್ಣ ಪ್ರಮಾಣದಲ್ಲಿ ಹಳ್ಳಿಗಳಿಗೆ ನೀರುಣಿಸಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. 3ನೇ ಕಂತಿಗೆ 25 ಲಕ್ಷ ರೂ. ಬಿಡುಗಡೆ ಆದಲ್ಲಿ ಯಾವುದಾದರೂ ಒಂದಿಷ್ಟು ಹಳ್ಳಿಗಳಿಗೆ ಸಮಾಧಾನ ಮಾಡಬಹುದು ಎನ್ನಲಾಗುತ್ತಿದೆ.

11 ಹಳ್ಳಿಗೆ ಟ್ಯಾಂಕರ್‌: ತಾಲೂಕಿನ ಹೋಬಳಿ ಕೇಂದ್ರ ಮಾನದಹಿಪ್ಪರಗಾ, ಮೋಘಾ (ಬಿ), ಗೋಳಾ (ಬಿ), ಕಾಮನಳ್ಳಿ, ಕಾತ್ರಾಬಾದ, ವಿ.ಕೆ. ಸಲಗರ, ದಣ್ಣೂರ, ಧರಿ ತಾಂಡಾದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಕೈಗೊಳ್ಳಲಾಗುತ್ತಿದೆ. ಅಲ್ಲದೆ, ತೀರ್ಥ ಜಮಗಾ ಆರ್‌. ತಾಂಡಾಗಳಲ್ಲಿ ಖಾಸಗಿಯವಾಗಿ ನೀರು ಖರೀದಿಸಿ ಪೂರೈಸಲಾಗುತ್ತಿದ್ದು, ಇನ್ನು 40 ಹಳ್ಳಿಗೆ ಟ್ಯಾಂಕರ್‌ ನೀರಿನ ಬೇಡಿಕೆ ಇದೆ ಎನ್ನುತ್ತಾರೆ ಅಧಿಕಾರಿಗಳು. 

ಬರ ಪರಿಹಾರ ಕಾಮಗಾರಿ ಮತ್ತು ಕುಡಿಯುವ ನೀರು ಪೂರೈಕೆ ಅನುದಾನ ಬಿಡುಗಡೆಯಲ್ಲಿ ಆಳಂದ ತಾಲೂಕನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕಡೆಗಣಿಸಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಮೂರು ಕಂತುಗಳಲ್ಲಿ ಒಟ್ಟು 1.50 ಕೋಟಿ ರೂ. ಅನುದಾನ ಒದಗಿಸಿದ್ದು, ಆಳಂದ ತಾಲೂಕಿಗೆ ಕೇವಲ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಬರಗಾಲ ಅನುದಾನ ಬಿಡುಗಡೆಯಲ್ಲೂ ತಾರತಮ್ಯ ನೀತಿ ಅನುಸರಿಸಿರುವುದು ಖಂಡನೀಯ
 ಸುಭಾಷ ಗುತ್ತೇದಾರ, ಶಾಸಕರು

„ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next