Advertisement
ಸರ್ಕಾರ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಪ್ರಗತಿಗಾಗಿ ಕೆಕೆಆರ್‌ಡಿಬಿ ಆರಂಭಿಸಿದೆ. ಆರಂಭದಲ್ಲಿ ಪ್ರತಿ ವರ್ಷ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದು, ಈಗ ಅದನ್ನು 1500 ಕೋಟಿಗೆ ಹೆಚ್ಚಿಸಲಾಗಿದೆ. 18 ವರ್ಷಗಳ ಹಿಂದೆ ಅನುಷ್ಠಾನಗೊಂಡ ನಂಜುಂಡಪ್ಪ ವರದಿಯನ್ವಯ ತೀರಾ ಹಿಂದುಳಿದತಾಲೂಕುಗಳ ಸಾಲಿಗೆ ರಾಜ್ಯದಲ್ಲಿ 114 ತಾಲೂಕುಗಳಿದ್ದರೆ; ಉತ್ತರ ಕರ್ನಾಟಕದ 59ಕ್ಕೂ ಅಧಿಕ ತಾಲೂಕುಗಳು ಸೇರಿವೆ.
Related Articles
Advertisement
ಸರ್ಕಾರದ ಮಟ್ಟದಲ್ಲಿ ಬದಲಾಗಬೇಕು
2013-14ನೇ ಸಾಲಿನಲ್ಲಿ ಸ್ಥಾಪನೆಗೊಂಡ ಕೆಕೆಆರ್ ಡಿಬಿಗೆ ಈವರೆಗೆ ಸಾಕಷ್ಟು ಅನುದಾನ ಬಂದಿದ್ದು, ಯಾವ ವರ್ಷವೂ ಪೂರ್ಣ ಪ್ರಮಾಣದಲ್ಲಿ ಖರ್ಚಾಗಿಲ್ಲ. ಅದರಲ್ಲೂ ಮೈಕ್ರೋ, ಮ್ಯಾಕ್ರೋ ಯೋಜನೆಯಡಿ ಅನುದಾನ ಹಂಚಿಕೆಯಾಗುತ್ತಿದ್ದು, ಶಾಸಕರಿಗೆ ಮೈಕ್ರೋ ಯೋಜನೆಯಡಿ ಮಾತ್ರ ಹೆಚ್ಚಾಗಿ ಅನುದಾನ ಸಿಗುತ್ತದೆ. ಮ್ಯಾಕ್ರೋ ಯೋಜನೆಯಡಿ ಸಿಎಂ, ಸಚಿವರು, ಕಾರ್ಯದರ್ಶಿಗಳಿಗೆ ಅಧಿ ಕಾರ ಹೆಚ್ಚಾಗಿದ್ದು, ಸಾಕಷ್ಟು ಅನುದಾನ ಬೇರೆ ಉದ್ದೇಶಗಳಿಗೂ ಬಳಸಿದ ನಿದರ್ಶನಗಳಿವೆ. ಆದರೆ, ಕ್ಷೇತ್ರವಾರು ಅನುದಾನ ಹಂಚಿಕೆ ಸರ್ಕಾರ ಮಟ್ಟದಲ್ಲಿ ಬದಲಾಗಬೇಕಿದೆ. ವಿಶೇಷ ಸಮಿತಿ ರಚಿಸಿ ಅದರ ವರದಿ ಆಧರಿಸಿ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಆರಂಭವಾಗಿದ್ದೇ ಸಿದ್ದರಾಮಯ್ಯ ಕಾಲದಲ್ಲಿ : ಕಟೀಲ್
ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ನೀಡುವ ಅನುದಾನ ಜತೆಗೆ ಕೆಕೆಆರ್ ಡಿಬಿಯಿಂದಲೂ ವಿಶೇಷ ಅನುದಾನ ನೀಡುತ್ತದೆ. ಆದರೀಗ ನಂಜುಂಡಪ್ಪ ವರದಿ ಆಧರಿಸಿ ಹಿಂದುಳಿದ ತಾಲೂಕುಗಳಿಗೆ ಅನುದಾನ ಹಂಚಿಕೆ ಮಾಡುತ್ತಿದ್ದು, ಒಂದೇ ತಾಲೂಕಿನಲ್ಲಿ ಎರಡು ಕ್ಷೇತ್ರಗಳಿದ್ದಲ್ಲಿ ಅನುದಾನ ಕೊರತೆಯಾಗುತ್ತಿದೆ. ಹೀಗಾಗಿ ವಿಧಾನಸಭೆ ಕ್ಷೇತ್ರವಾರು ಹಂಚಿಕೆ ಮಾಡುವಂತೆ ಸರ್ಕಾರದ ಗಮನಕ್ಕೆ ತಂದಾಗ ಹಿಂದಿನ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿತ್ತು. ಸರ್ಕಾರ ಬದಲಾದ ಕಾರಣ ಸಮಸ್ಯೆಯಾಗಿದೆ.
ದದ್ದಲ್ ಬಸನಗೌಡ, ರಾಯಚೂರು ಗ್ರಾಮೀಣ ಶಾಸಕ.
ಸಿದ್ಧಯ್ಯಸ್ವಾಮಿ ಕುಕುನೂರು