ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನಬಯ್ಯಪ್ಪನಹಳ್ಳಿ ಗ್ರಾಮದಲ್ಲಿ ಸಹಕಾರ ಸಂಘಗಳಮೂಲಕ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿಅಧಿಕಾರಿಗಳು ಸೌಲಭ್ಯ ಪಡೆದುಕೊಂಡಿರುವಫಲಾನುಭವಿಗಳಿಗೆ ಪುನಃ ಸೌಲಭ್ಯ ಕಲ್ಪಿಸಿದ್ದಾರೆಂದು ಆರೋಪಿಸಿ, ನೇಕಾರರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸಮ್ಮುಖದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ ಮುಕ್ತಾಯಗೊಳಿಸಿ ಕೈಮಗ್ಗ ಮತ್ತು ಜವಳಿಇಲಾಖೆಯಿಂದ ಫಲಾನುಭವಿಗಳಿಗೆ ಸಲಕರಣೆವಿತರಿಸುವ ವೇಳೆಯಲ್ಲಿ ಬಯ್ಯಪ್ಪನಹಳ್ಳಿಯನೇಕಾರರು ಸೌಲಭ್ಯ ವಿತರಿಸಲು ಆಕ್ಷೇಪ ವ್ಯಕ್ತಪಡಿಸಿದರು.
ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಗ್ರಾಮಸ್ಥರು ಅಧಿಕಾರಿಗಳ ಕಾರ್ಯವೈಖರಿವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರಿಸೌಲಭ್ಯ ಈ ಹಿಂದೆ ಯಾರು ಪಡೆದುಕೊಂಡಿದ್ದಾರೋ, ಅವರಿಗೆ ಪುನಃ ಸೌಲಭ್ಯ ಒದಗಿಸುವುದು ಯಾವ ನೀತಿಯೆಂದುಪ್ರಶ್ನಿಸಿ ಜಿಪಂ ಅಧ್ಯಕ್ಷ ಎಂಬಿ ಚಿಕ್ಕನರಸಿಂಹಯ್ಯಸಮ್ಮುಖದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಕುಮಾರ್‌ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಸಮಾಧಾನ: ಕೃಷಿ, ಕೈಗಾರಿಕೆ ಸಹಿತ ಅನೇಕ ಕ್ಷೇತ್ರಗಳಲ್ಲಿ ವೈಜ್ಞಾನಿಕ ಮತ್ತು ಆಧುನಿಕ ಪದ್ಧತಿಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೈಮಗ್ಗಮತ್ತು ಜವಳಿ ಇಲಾಖೆಯಲ್ಲಿ ಮಾತ್ರ ಹಳೆಪದ್ಧತಿಯಲ್ಲಿ ಸಲಕರಣೆ ಮತ್ತು ಸಾಮಗ್ರಿಗಳ ವಿತರಣೆ ಮಾಡುವುದಕ್ಕೆ ಜಿಪಂ ಅಧ್ಯಕ್ಷರುಖುದ್ದಾಗಿ ಆಕ್ಷೇಪ ವ್ಯಕ್ತಪಡಿಸಿ ನೇಕಾರರಿಗೆ ಆಧುನಿಕ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಇಲಾಖೆ ಉಪನಿರ್ದೇಶಕರಿಗೆ ತಾಕೀತು ಮಾಡಿದರು.
ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದ ಫಲಾನುಭವಿಗಳನ್ನು ಹೊರತುಪಡಿಸಿಇನ್ನೂಳಿದ ತಾಲೂಕುಗಳ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ಜಿಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ವಿತರಿಸಿದರು.
ಜಿಪಂ ಉಪಾಧ್ಯಕ್ಷೆ ಸರಸ್ವತಮ್ಮ, ಜಿಪಂ ಸಿಇಒಪಿ.ಶಿವಶಂಕರ್, ಜಿಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ರಾಜಾಕಾಂತ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷಬಂಕ್ ಮುನಿಯಪ್ಪ, ಜಿಪಂ ಸದಸ್ಯೆಕಮಲಮ್ಮ,ಇಲಾಖೆ ಉಪನಿರ್ದೇಶಕ ಶಿವಕುಮಾರ್ ಇದ್ದರು.
ವಂಚಿತ ಫಲಾನುಭವಿಗೆ ಸೌಲಭ್ಯ ಕಲ್ಪಿಸಿ :
ಬಯ್ಯಪ್ಪನಹಳ್ಳಿ ಗ್ರಾಮದಲ್ಲಿ ಈ ಹಿಂದೆಸರ್ಕಾರದಿಂದ ಸೌಲಭ್ಯ ಪಡೆದಿರುವ ಫಲಾನುಭವಿ ಪುನಃ ಪಡೆದುಕೊಂಡಿರುವುದನ್ನು ಪತ್ತೆಹಚ್ಚಿ ನಂತರ ಅರ್ಹ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿ ಬಯ್ಯಪ್ಪನಹಳ್ಳಿ ಗ್ರಾಮಕ್ಕೆ ತೆರಳಿ ವಾಸ್ತವಂಶವನ್ನು ಅರಿತು ಸರ್ಕಾರಿ ಸೌಲಭ್ಯವಂಚಿತ ಫಲಾನುಭವಿಗೆ ಸೌಲಭ್ಯ ಕಲ್ಪಿಸಿ ಎಂದು ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ತಾಕೀತು ಮಾಡಿದರು.