ಮೈಸೂರು: ಪೆಟ್ರೋಲ್, ಡೀಸೆಲ್ ದರ ಗಗನಮುಖೀಯಾಗಿರುವ ಈ ದಿನಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈಸೂರು ಸ್ನಾತಕೋತ್ತರ ಕೇಂದ್ರದ ಎಂ.ಟೆಕ್ ವಿದ್ಯಾರ್ಥಿಯೊಬ್ಬ ನೀರನ್ನು ಇಂಧನವಾಗಿ ಪರಿವರ್ತಿಸುವ ಸಾಧನ ಆವಿಷ್ಕರಿಸಿದ್ದಾರೆ.
ಉಷ್ಣ ವಿದ್ಯುತ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನಯ್ಯ ಸಿ.ಮಠ ಅವರ ಮಾರ್ಗದರ್ಶನ ದಲ್ಲಿ, ಎನ್.ಸಾಜಿದ್ ನೀರನ್ನು ಇಂಧನವಾಗಿ ಪರಿವರ್ತಿಸುವ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಉತ್ಪಾದಿಸಲ್ಪಟ್ಟ ಇಂಧನವನ್ನು ಸಾಂಪ್ರದಾಯಿಕ ಇಂಧನ ಪೆಟ್ರೋಲ್ ಜತೆ ಸಮೀಕರಿಸಿ ವಾಹನ ಚಲಾಯಿಸಲು ಬಳಸಿಕೊಳ್ಳಲಾಗುತ್ತಿದೆ. ಪರೀûಾರ್ಥ ಚಾಲನೆಯಲ್ಲಿ ವಾಹನದ ಮೈಲೇಜ್‌ನಲ್ಲಿ ಶೇ.35 ಹೆಚ್ಚಳ ಕಂಡುಬಂದಿದೆ.
ಈ ಸಾಧನವು ಒಂದು ವಿದ್ಯುದ್ವಿಭಜನೆಯ ಕಿಟ್, ನೀರಿನ ಹಾಗೂ ಜಲಜನಕ ಅನಿಲ ಸಂಗ್ರಹಣೆ ಟ್ಯಾಂಕ್ ಮತ್ತು ಒಂದು ಬ್ಯಾಟರಿಯನ್ನು ಒಳಗೊಂಡಿದೆ. ವಿದ್ಯುದ್ವಿಭಜನೆಯ ಕಿಟ್ ಎರಡು ಪೈಬರ್ ಫಲಕಗಳ ಮಧ್ಯ ಸ್ಟೀಲ್‌ಫಲಕ ಹೊಂದಿದ್ದು, ವಿದ್ಯುತ್ ನಿರೋಧನ ಫಲಕವನ್ನು ಸ್ಟೀಲ್ ಫಲಕಗಳ ಮಧ್ಯ ಸೇರಿಸಲಾಗಿದೆ. ಈ ಫಲಕಗಳನ್ನು ಬ್ಯಾಟರಿಯ ಟರ್ಮಿನಲ್‌ಗಳೊಂದಿಗೆ ಸಂಪರ್ಕಿಸಲಾಗಿದೆ.
ನೀರಿನ ಟ್ಯಾಂಕ್ ಹಾಗೂ ವಿದ್ಯುದ್ವಿಭಜನೆಯ ಕಿಟ್ ನಡುವೆ ಪೈಪ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುದ್ವಿಭಜನೆಯ ಕಿಟ್‌ನಲ್ಲಿ ನೀರು ಅಮ್ಲಜನಕ ಹಾಗೂ ಜಲಜನಕವಾಗಿ ವಿಭಜನೆಗೊಳ್ಳುತ್ತದೆ. ಉತ್ಪಾದನೆಯಾದ ಜಲಜನಕ ಸಾಂದ್ರತೆಯ ವ್ಯತ್ಯಾಸದಿಂದಾಗಿ ನೀರಿನ ಟ್ಯಾಂಕ್‌ನ ಮೇಲ್ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ.
ಸಂಗ್ರಹಿಸಿದ ಜಲಜನಕ ನೀರಿನ ಟ್ಯಾಂಕ್ ಮೇಲೆ ಸಂಪರ್ಕವಿರುವ ಪೈಪ್ ಮೂಲಕ ಪೆಟ್ರೋಲ್ ಸರಬರಾಜು ಮಾಡುವ ಪೈಪ್‌ಗೆ ಸೇರಿಕೊಳ್ಳುತ್ತದೆ. ಜಲಜನಕ ಹಾಗೂ ಪೆಟ್ರೋಲ್ ಮಿಶ್ರಣವು ಕಾಬ್ಯುರೇಟರ್ ಮೂಲಕ ಎಂಜಿನ್‌ನ ಸಿಲಿಂಡರ್‌ಗೆ ಪೂರೈಕೆ ಆಗುತ್ತದೆ. ಈ ಕಿಟ್‌ನೊಂದಿಗಿನ ಪರೀûಾರ್ಥ ಚಾಲನೆಯಲ್ಲಿ ವಾಹನವನ್ನು ಸಾಮಾನ್ಯ ಸ್ಥಿತಿಯಲ್ಲಿ, 50 ಕಿ.ಮೀ ವೇಗದಲ್ಲಿ ಚಲಾಯಿಸಿದಾಗ ಶೇ.35 ಹೆಚ್ಚು ಮೈಲೇಜ್ ಕಂಡುಕೊಳ್ಳಲಾಗಿದೆ.
ಎಂಜಿನ್‌ನ ವಿನ್ಯಾಸದಲ್ಲಿ ಯಾವುದೇ ಮಾರ್ಪಾಡು ಅಗತ್ಯವಿಲ್ಲದ ಕಾರಣ ಜನಸಾಮಾನ್ಯರೂ ಈ ತಂತ್ರಜಾnನವನ್ನು ಬಳಸಿಕೊಳ್ಳಬಹುದು ಎಂದು ಡಾ.ಮಲ್ಲಿಕಾರ್ಜುನಯ್ಯ ಸಿ.ಮಠ ತಿಳಿಸಿದ್ದಾರೆ. ಹೆಚ್ಚುವರಿ ಸಂಶೋಧನೆಯೊಂದಿಗೆ ಈ ತಂತ್ರಜಾnನವನ್ನು ಇನ್ನಷ್ಟು ಸುಧಾರಿಸಬಹುದಾಗಿ ಎಂದು ಎನ್.ಸಾಜಿದ್ ಹೇಳುತ್ತಾರೆ.