Advertisement

ಜಗತ್ತಿನ ಅತೀ ಪ್ರಾಚೀನ ಅರಣ್ಯ ಪತ್ತೆ!

07:02 PM Jun 02, 2020 | Sriram |

ಇತಿಹಾಸ ಎಂಬುವುದು ಹಾಗೆಯೇ ಅದು ಮಣ್ಣಿನಲ್ಲಿ ಮುಚ್ಚಿಹೋಗಿದೆ. ಉತ್ಖನನ ಮಾಡಿದಾಗಲೇ ತಿಳಿಯುವುದು ನಮಗೆ ಅಲ್ಲಿನ ಸ್ಥಳದ ಮಹಿಮೆ ಮತ್ತು ಐತಿಹಾಸಿಕ ಕುರುಹು. ಜಗತ್ತಿನ ಸೃಷ್ಟಿಯ ಬಗ್ಗೆ ನಾನಾ ರೀತಿಯ ಸಂಶೋಧನೆಗಳು ನಡೆದಿವೆ. ಹೇಗೆ ಹುಟ್ಟಿತು, ಕಾರಣವೇನು ಎಂಬ ಅಂಶಗಳನ್ನು ಅಧ್ಯಯನ ಮಾಡಿ ಜಗತ್ತಿಗೆ ತಿಳಿಸುವ ಕಾರ್ಯವಾಗುತ್ತಿದೆ.

Advertisement

ಜಗತ್ತಿನ ಅತೀ ಪ್ರಾಚೀನ ಅರಣ್ಯವೊಂದು ಈಗ ಪತ್ತೆಯಾಗಿದೆ! ನ್ಯೂಯಾರ್ಕ್‌ ಕ್ಯಾಟ್‌ಸ್ಕಿಲ್‌ ಪರ್ವತಗಳ ತಪ್ಪಲಿನಲ್ಲಿ ಜಗತ್ತಿನ ಅತೀ ಪ್ರಾಚೀನ ಅರಣ್ಯವನ್ನು ವಿಜ್ಞಾನಿಗಳು ಶೋಧಿಸಿದ್ದಾರೆ. ಇದು ಸುಮಾರು 386 ಮಿಲಿಯನ್‌ ವರ್ಷಗಳಷ್ಟು ಹಳೆಯ ಅರಣ್ಯವಾಗಿದ್ದು ಈ ಕಾಡು ಕಲ್ಲು, ಮಣ್ಣಿನ ಗಣಿಗಳಿಂದ ಕೂಡಿದೆ.

ಈ ಅತೀ ಪ್ರಾಚೀನ ಅರಣ್ಯವು ನ್ಯೂಯಾರ್ಕ್‌ನಿಂದ ಪೆನ್ಸಿಲ್ವೇನಿಯಾ ಅದರಾಚೆಗೂ ಹರಡಿಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಅರಣ್ಯದಲ್ಲಿ ಕ್ಲಾಡಾಕ್ಸಿಲೋಪ್ಸಿಡ್‌ ಮತ್ತು ಅರ್ಕಿಯೋಪ್ಟಿರಿಸ್‌ ಎಂಬ ಎರಡು ಜಾತಿಯ ಮರಗಳಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇದರಲ್ಲಿ ಕ್ಲಾಡಾಕ್ಸಿಲೋಪ್ಸಿಡ್‌ ಮರವು ಜರಿಗಿಡದ ಸಸಿಯಾಗಿದ್ದು, ಯಾವುದೇ ಹಸುರು ಎಲೆಗಳನ್ನು ಹೊಂದಿಲ್ಲ ಮತ್ತು ಅರ್ಕಿಯೋಪ್ಟಿರಿಸ್‌ ಮರವು ಹಸುರು ಎಲೆ, 11 ಮೀ. ಹೆಚ್ಚು ಉದ್ದಗಳಷ್ಟು ವ್ಯಾಪಕವಾಗಿ ಬೇರಿನ ಜಾಲ ಹರಡಿಕೊಂಡಿರುವುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಈ ಪ್ರಾಚೀನ ಅರಣ್ಯದಲ್ಲಿ ಯಾವುದೇ ಹಕ್ಕಿಗಳು ಮತ್ತು ಪ್ರಾಣಿಗಳಿರುವುದು ಕಂಡು ಬಂದಿಲ್ಲ. ಇನ್ನು ಡೈನೋಸಾರ್‌ಗಳಂತ ಪ್ರಾಣಿಗಳು ಇರುವುದು ದೂರದ ಮಾತು. ಆದರೆ ಈ ಅರಣ್ಯದಲ್ಲಿ ಕೀಟಗಳ ವಾಸ ಸ್ಥಾನವಾಗಿದೆ. ಇನ್ನು ಈ ಅರಣ್ಯದ ವಾತಾವರಣವೂ ಭೂಮಿಯ ಹವಾಮಾನದ ಇತಿಹಾಸವನ್ನೇ ಸೂಚಿಸುವಂತಿದೆ. ಇಲ್ಲಿನ ಮರಗಳು ದಪ್ಪವಾಗಿದ್ದು, ಇಂಗಾಲದ ಡೈ ಆಕ್ಸೈಡ್‌ನ್ನು ಹೊರ ತಗೆಯುವಂತಿವೆ.

ಆದರೆ ಈ ಕಾಡಿನ ನಾಶ ಹೇಗಾಯಿತು ಎಂಬ ಕುತೂಹಲ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸುವಂತೆ; ಈ ಕಾಡು ಭಯಂಕರವಾದ ಪ್ರವಾಹಕ್ಕೆ ಸಿಲುಕಿ ನಾಶವಾಗಿರಬಹುದು ಎನ್ನುತ್ತಾರೆ. ಇಲ್ಲಿನ ಕಲ್ಲಿನ ಕ್ವಾರೆಯಲ್ಲಿರುವ ದೊಡ್ಡ ಪಳೆಯುವಳಿಕೆ ನೋಡಿದಾಗ ಈ ಅರಣ್ಯ ಪ್ರವಾಹಕ್ಕೇ ನಾಶವಾಗಿದೆ ಎಂಬ ಸತ್ಯ ಮೇಲ್ನೋಟಕ್ಕೆ ತಿಳಿಯಬಹುದಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next