Advertisement

ಪ್ರವಚನ ಸ್ಥಳ ವೀಕ್ಷಣೆ

12:21 PM Jul 10, 2018 | |

ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ (ಮೂಲ ನಂದೀಶ್ವರ) ಜಾತ್ರೆ ಪ್ರಯುಕ್ತ ಶ್ರಾವಣ ಮಾಸದಲ್ಲಿ ಪಟ್ಟಣದ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿ ನಡೆಯಲಿರುವ ಪ್ರವಚನದ ಸ್ಥಳವನ್ನು ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಗಣ್ಯರು ವೀಕ್ಷಿಸಿದರು.

Advertisement

ನಂತರ ಮಾತನಾಡಿದ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ ಹಾಗೂ ಬಸವರಾಜ ಗೊಳಸಂಗಿ, ಪ್ರತಿ ವರ್ಷದಂತೆ ಈ ವರ್ಷದ ಬಸವೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಅಚರಣೆ ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಗಸ್ಟ್‌ 12ರಿಂದ ನಿಜಗುಣಾನಂದ ಸ್ವಾಮೀಜಿ ಅವರು ಒಂದು ತಿಂಗಳವರೆಗೆ ಪ್ರವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಪ್ರವಚನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಸಾಹಿತಿ ಲ.ರು. ಗೊಳಸಂಗಿ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ವೈ.ಡಿ. ನಾಯ್ಕೋಡಿ, ಉಮೇಶ ಹಾರಿವಾಳ, ಸಂಗಪ್ಪ ವಾಡೇದ, ಅನಿಲ ಪವಾರ, ಮಲ್ಲೇಶಿ ಕಡಕೋಳ, ಸುಭಾಷ್‌ ಚಿಕ್ಕೊಂಡ, ಶೇಖರಗೌಡ ಪಾಟೀಲ, ಬಸವರಾಜ ನಾಯ್ಕೋಡಿ, ಶಿವಾನಂದ ತೊಳನೂರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next