Advertisement

ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯ್ತಿ ನೀಡಿ

05:10 AM Jul 11, 2020 | Lakshmi GovindaRaj |

ಪಿರಿಯಾಪಟ್ಟಣ: ಪಿರಿಯಾಪಟ್ಟಣ-ಬೆಟ್ಟದಪುರ ನಡುವಿನ ರಾಜ್ಯ ಹೆದ್ದಾರಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಾ. ಪ್ರಕಾಶ್‌ ಬಾಬು ರಾವ್‌ ನೇತೃತ್ವದಲ್ಲಿ ಕೆಆರ್‌ಡಿಸಿಎಲ್‌  ವ್ಯವಸ್ಥಾಪಕರಿಗೆ  ಮನವಿ ಸಲ್ಲಿಸಿದರು.

Advertisement

ಬಳಿಕ ಡಾ.ಪ್ರಕಾಶ್‌ ರಾವ್‌ ಮಾತನಾಡಿ, ಪಿರಿಯಾ ಪಟ್ಟಣ-ಬೆಟ್ಟದಪುರ ಹಾಸನ ಮುಖ್ಯರಸ್ತೆಯ ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾದ ಬಳಿಕ ಪ್ರತಿದಿನ ಸಹಸ್ರಾರು ವಾಹನಗಳು ರಸ್ತೆಯಲ್ಲಿ  ಸಂಚರಿಸುತ್ತವೆ. 6 ತಿಂಗಳ ಹಿಂದೆ ಪಿರಿಯಾಪಟ್ಟಣ- ಹಾಸನ ಮುಖ್ಯ ರಸ್ತೆಯ ಭುವನಹಳ್ಳಿ ಗೇಟ್‌ ಬಳಿ ಟೋಲ್‌ ಸಂಗ್ರಹಣೆ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯರು, ರೈತರು, ಕಾರ್ಮಿಕರಿಗೆ ತೊಂದರೆಯಾಗಿದ್ದು, ಅವರಿಗೆ ಕೆಆರ್‌ ಡಿಸಿಎಲ್‌ ರಿಯಾಯಿತಿ  ನೀಡಬೇಕು.

ಟೋಲ್‌ ಸ್ಥಳದಲ್ಲಿ ಶೌಚಾಲಯ, ತುರ್ತು ಚಿಕಿತ್ಸಾ ವಾಹನ, ವಾಹನಗಳ ಸಂಚಾರದ ಮಾಹಿತಿ ನೀಡಲು ನಾಮಫ‌ಲಕ, ಕುಡಿ ಯುವ ನೀರಿನ ಸೌಲಭ್ಯ, ರಸ್ತೆಬದಿ ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಮೂಲ ಸೌಲಭ್ಯ  ಒದಗಿಸಬೇಕು ಎಂದು ಆಗ್ರಹಿಸಿದರು. ಬೆಟ್ಟದಪುರ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿದೆ. ಹೆದ್ದಾರಿಯಲ್ಲಿ ಪ್ರತಿನಿತ್ಯ ನೂರಾರು ಡಸ್ಟ್‌, ಜಲ್ಲಿ ತುಂಬಿದ ಲಾರಿ, ಟ್ರ್ಯಾಕ್ಟರ್‌ ಸೇರಿದಂತೆ ಇನ್ನಿತರ ವಾಹನಗಳು ಸಂಚರಿಸುತ್ತಿವೆ.

ಇವು  ವಾಹನಗಳಿಂದ ಜಾರಿ ಬೀಳುವುದಲ್ಲಿ ಬೈಕ್‌ ಸವಾರರ ಮೇಲೆ ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಅಲ್ಲಿಯವರೆಗೂ ಟೋಲ್‌ ಸಂಗ್ರಹಣೆ ನಿಲ್ಲಿಸಬೇಕು ಎಂದು ಎಚ್ಚರಿಸಿದರು. ಈ  ಸಂದರ್ಭದಲ್ಲಿ ಭುವನಹಳ್ಳಿ ಗ್ರಾಪಂ ಅಧ್ಯಕ್ಷ ಈರೇಗೌಡ, ಸ್ಥಳೀಯ ಮುಖಂಡ ಅರುಣ್‌ ರಾಜೇ ಅರಸ್‌, ಲಕ್ಷ್ಮೀನಾರಾಯಣ, ಹೆಬ್ಟಾಗಿಲು ಪ್ರವೀಣ್‌, ಸುನೀಲ್‌ ಕುಮಾರ್‌, ನಾಗೇಶ್‌, ಚಂದ್ರು,  ವಿಕಾಶ್‌, ವಿನಯ್‌ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next