ನವದೆಹಲಿ: ಪ್ರಸಕ್ತ ವರ್ಷದ ಗಣರಾಜ್ಯ ನಿಮಿತ್ತ ಏರ್ ಇಂಡಿಯಾ ಬೆಂಗಳೂರು ಸೇರಿದಂತೆ ದೇಶದ 49ಕ್ಕೂ ಅಧಿಕ ಪ್ರಮುಖ ಸ್ಥಳಗಳಿಗೆ ವಿಧಿಸಲಾಗುವ ಟಿಕೆಟ್ ದರ ದಲ್ಲಿ ಆಕರ್ಷಕ ರಿಯಾಯಿತಿ ಪ್ರಕಟಿಸಿದೆ. ಜ.23ರ ವರೆಗೆ ಈ ಕೊಡುಗೆ ಅನ್ವಯವಾಗಲಿದೆ.
ಏರ್ ಇಂಡಿಯಾದ ಅಧಿಕೃತ ಟಿಕೆಟ್ ಮಾರಾಟಗಾರರು ಸೇರಿದಂತೆ ಎಲ್ಲಾ ಬುಕಿಂಗ್ ವ್ಯವಸ್ಥೆಗಳಲ್ಲಿ ಈ ಆಕರ್ಷಕ ಕೊಡುಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಇಕಾನಮಿ ಕ್ಲಾಸ್‌ಗಳಿಗೆ ಮಾತ್ರ ರಿಯಾಯಿತಿ ದರ ಅನ್ವಯವಾಗಲಿದೆ. ಫೆ.1ರಿಂದ ಸೆ.30ರ ವರೆಗೆ ದೇಶದ ಪ್ರಮುಖ ಮಾರ್ಗಗಳಲ್ಲಿ ಆಫರ್ ಲಭ್ಯವಾಗಲಿದೆ. ಏಕಮುಖ ಪ್ರಯಾಣ (ಒನ್ ವೇ)ಕ್ಕೆ 1, 705 ರೂ.ಗಳಿಂದ ಟಿಕೆಟ್ ದರ ಶುರುವಾಗಲಿದೆ.
ಕುಟುಂಬದೊಂದಿಗೆ ಕನಸಿನ ರಜಾದಿನ ಪ್ರವಾಸ ಸೇರಿದಂತೆ ಯಾವುದೇ ಪ್ರವಾಸಕ್ಕೆ ಆಫರ್ ಅನ್ವಯವಾಗಲಿದೆ. ಬೆಂಗಳೂರು ಮುಂಬೈ ನಡುವೆ ಟಿಕೆಟ್‌ಗೆ 2,319 ರೂ. ದರ ನಿಗದಿ ಮಾಡಲಾಗಿದೆ. ಹೆಚ್ಚಿನ ವಿವರಕ್ಕೆ ಗಳಿಗಾಗಿ ನಮ್ಮ ವೆಬ್‌ಸೈಟ್ www.airindia.in ಗೆ ಲಾಗ್ ಇನ್ ಆಗಿ. 1860 233 1407 ಸಂಖ್ಯೆಗೆ ಕರೆ ಮಾಡಿ.