ಕಲಬುರಗಿ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಶಿಸ್ತು, ಸಮಯ ಪ್ರಜ್ಞೆ, ಸರಿಯಾದ ಗುರಿ ಇದ್ದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪಾಂಶುಪಾಲ ಐಪಿಎಸ್ ಅಧಿಕಾರಿ ಯಡಾ ಮಾರ್ಟಿನ್ ಹೇಳಿದರು.
ಗುವಿವಿಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿ ಕಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲಿ ಇವತ್ತು ಸ್ಪರ್ಧೆ ಇದೆ. ಶಿಕ್ಷಣ ಕ್ಷೇತ್ರದಲ್ಲಂತೂ ಪ್ರತಿ ವಿದ್ಯಾರ್ಥಿ ತನ್ನ ಅರ್ಹತೆ ಮತ್ತು ಕ್ಷಮತೆಯನ್ನು ಸಾಬೀತು ಮಾಡಬೇಕಾದ ದಿನಗಳು ಈಗಿವೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆ ಸೇರಿದಂತೆ ಇತರೆ ಎಲ್ಲ ವರ್ಗದಲ್ಲಿ ಶ್ರಮವಹಿಸಲು ಪ್ರಾಮಾಣಿಕತೆ, ಗುರಿ ಮತ್ತು ಸಮಯ ಪ್ರಜ್ಞೆ ಇಟ್ಟುಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಡಾ| ಹಣಮಂತ ಜಂಗೆ, ಹಾಕಿಮಾಂತ್ರಿಕ ದ್ಯಾನ್ ಚಂದ್ ಅವರ ಹುಟ್ಟು ಹಬ್ಬದ ಕುರಿತು ಆಯೋಜಿಸಿರುವ ವಿಸಿ ಕಪ್ ಆಯೋಜನೆ ಸ್ಪೂರ್ತಿದಾಯಕ. ಕ್ರೀಡೆಯಲ್ಲಿ ಪ್ರತಿ ವಿದ್ಯಾರ್ಥಿ ಪಾಲ್ಗೊಳ್ಳಬೇಕು. ಪ್ರತಿ ದಿನವೂ ವ್ಯಾಯಾಮ, ಯೋಗ ಮಾಡಿದ್ದಲ್ಲಿ ಆರೋಗ್ಯದಿಂದ ಇರಲು ಸಾಧ್ಯವಿದೆ. ಕೊರೊನಾ ಬಳಿಕ ಆರೋಗ್ಯದ ಕುರಿತು ಎಚ್ಚರಿಕೆ ಎಲ್ಲರಲ್ಲೂ ಅಗತ್ಯವಾಗಿಬೇಕು ಎಂದರು.
ಕುಲಸಚಿವ ಪ್ರೊ| ವಿ.ಟಿ.ಕಾಂಬಳೆ, ಪ್ರೊ| ಚಂದ್ರಕಾಂತ ಯಾತನೂರ, ಡಾ| ಎಂ.ಎಸ್. ಪಾಸೋಡಿ, ಡಾ| ಎನ್ .ಬಿ.ಕಣ್ಣೂರ್ ಹಾಗೂ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಮಹಾದೇವ ಸ್ವಾಮಿ, ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಬಾಬು ಬಿಳಗಿ ಉಪಸ್ಥಿತರಿದ್ದರು.