Advertisement

ಅಶಿಸ್ತು: ಕೊಹ್ಲಿಗೆ ಒಂದು ಋಣಾತ್ಮಕ ಅಂಕ

11:38 PM Sep 23, 2019 | Team Udayavani |

ಬೆಂಗಳೂರು: ರವಿವಾರದ ಟಿ20 ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ವಿರಾಟ್‌ ಕೊಹ್ಲಿ ಅವರಿಗೆ ಐಸಿಸಿ ಎಚ್ಚರಿಕೆ ನೀಡುವ ಜತೆಗೆ ಒಂದು “ಋಣಾತ್ಮಕ ಅಂಕ’ ನೀಡಿದೆ. ಪಂದ್ಯದ 5ನೇ ಓವರ್‌ ವೇಳೆ ರನ್‌ ಗಳಿಸುತ್ತಿದ್ದಾಗ ಎದುರಾಳಿ ಆಟಗಾರ ಬ್ಯೂರನ್‌ ಹೆಂಡ್ರಿಕ್ಸ್‌ ಅವರಿಗೆ ಕೊಹ್ಲಿ ಭುಜ ತಾಗಿಸಿ ಐಸಿಸಿ ನಿಯಮವನ್ನು ಉಲ್ಲಂಘಿಸಿದ್ದರು.

Advertisement

2018ರ ಜನವರಿ ಬಳಿಕ ಕೊಹ್ಲಿಗೆ ವಿಧಿಸ ಲಾದ 3ನೇ ಋಣಾತ್ಮಕ ಅಂಕ ಇದಾಗಿದೆ. 24 ತಿಂಗಳ ಅವಧಿಯಲ್ಲಿ ಈ ಅಂಕ ನಾಲ್ಕರ ಗಡಿ ತಲುಪಿದರೆ ಆ ಆಟಗಾರನನ್ನು ನಿಷೇಧಕ್ಕೆ ಒಳಪಡಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next