Advertisement
ನಗರದ ಅಶೋಕ ರಸ್ತೆಯಲ್ಲಿರುವ ಹರಿಮಂದಿರದಲ್ಲಿ ಬುಧವಾರ ನಾಮದೇವ ಸಿಂಪಿ ಸಮಾಜದ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಿಂಪಿ ಸಮಾಜ ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದು, ಈ ಬಾರಿ ಸಹ ಅದನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ನೀವು ಅಭಿನಂದಿಸುವುದಕ್ಕಿಂತ ನಾನು ನಿಮ್ಮನ್ನು ಅಭಿನಂದಿಸುವುದೇ ಸೂಕ್ತ ಎಂದು ಹೇಳಿದರು. ರಾಜ್ಯದಲ್ಲಿ ಹಿಂದುಳಿದ ಸಮಾಜ ದೊಡ್ಡ ಪ್ರಮಾಣದಲ್ಲಿದೆ. ತಾಲೂಕಿನಲ್ಲಿ ಸಹ ಹಿಂದುಳಿದ ಸಮಾಜದ ಬಹುಸಂಖ್ಯಾತರು ಎನಿಸಿಕೊಂಡವರು ಸರ್ಕಾರದ ಬಹುತೇಕ ಸೌಲಭ್ಯಗಳನ್ನು ತಮ್ಮದಾಗಿಸಿಕೊಂಡು ಬಿಡುತ್ತಾರೆ. ಆದರೆ ನನ್ನ ಅವ ಧಿಯಲ್ಲಿಅಂತಹ ಅಚಾತುರ್ಯ ನಡೆಯಲು ಅವಕಾಶ ಕೊಡುವುದಿಲ್ಲ. ಎಲ್ಲ ಜನಾಂಗಕ್ಕೂ ಸರ್ಕಾರದ ಯೋಜನೆ ಸಮಪ್ರಮಾಣದಲ್ಲಿ ಹಂಚಿಕೆಯಾಗುವಂತೆ ನಿಗಾ ವಹಿಸಲಾಗುತ್ತದೆ. ಜೊತೆಗೆ ಸಮುದಾಯ ಭವನ ನಿರ್ಮಾಣ ಮಾಡುವ ನಿಮ್ಮ ಆಶಯಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಕಾಶಿನಾಥ ಚೌಧರಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್, ಕಾರ್ಯದರ್ಶಿ ಚೇತನರಾಜ್ ಕಣ್ಣೂರು, ಕೃಷ್ಣಮೂರ್ತಿ ಬೆನ್ನೂರು ಇದ್ದರು. ಗಣೇಶ್ ಚೌಧರಿ ಸ್ವಾಗತಿಸಿದರು. ದಿಲೀಪ್ ಚೌಧರಿ ವಂದಿಸಿದರು. ಪವನ್
ನಿರೂಪಿಸಿದರು.