Advertisement

ನಿರ್ಲಕ್ಷ್ಯಾವಹಿಸಿದರೆ ಶಿಸ್ತು ಕ್ರಮ

01:58 PM Aug 14, 2018 | Team Udayavani |

ಯಾದಗಿರಿ: ಮುಖ್ಯಮಂತ್ರಿ ಅವರ ಜನತಾ ದರ್ಶನ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಲಿಕ ಬರ ಪರಿಸ್ಥಿತಿ ಹಾಗೂ ಮುಖ್ಯಮಂತ್ರಿ
ಅವರು ಕೈಗೊಳ್ಳಲಿರುವ ಸಾರ್ವಜನಿಕ ಕುಂದುಕೊರತೆ ದೂರುಗಳ ವೀಡಿಯೊ ಸಂವಾದ ಕುರಿತ ಪೂರ್ವಭಾವಿ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಅವರು ಆಗಸ್ಟ್‌ 17ರಂದು ಸಾರ್ವಜನಿಕ ಕುಂದುಕೊರತೆ ದೂರುಗಳ ಬಗ್ಗೆ ವೀಡಿಯೊ ಸಂವಾದ ನಡೆಸುವರು. ಅರ್ಜಿಗಳ ವಿಲೇವಾರಿಗೆ ಅನಗತ್ಯವಾಗಿ ವಿಳಂಬ ಮಾಡುವ ಅಧಿಕಾರಿಗಳು ನೇರ ಹೊಣೆಗಾರರಾಗಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಏಪ್ರಿಲ್‌ 1ರಿಂದ ಇಲ್ಲಿಯವರೆಗೆ 6 ಅರ್ಜಿಗಳು ಬಂದಿದ್ದು, 2 ಪರಿಹರಿಸಲಾಗಿದೆ. 4 ತಿರಸ್ಕೃತವಾಗಿವೆ. ಹುಣಸಗಿ ಗ್ರಾಮದ ಅಮರಪ್ಪ ಅವರು ಸಲ್ಲಿಸಿದ್ದ ತಮ್ಮ 12 ಗುಂಟೆ ಜಮೀನು ಸರ್ವೇ ಮಾಡುವ ಅರ್ಜಿ ಮತ್ತು ಇದೇ ಗ್ರಾಮದ ಶಿವಕುಮಾರ ಅವರು ಸಲ್ಲಿಸಿದ್ದ 1.20 ಎಕರೆ ಹೊಲವನ್ನು ಕೆಬಿಜೆಎನ್‌ ಎಲ್‌ನಲ್ಲಿ ಉಳಿಸಿಕೊಳ್ಳುವಂತೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಮಾನ್ಯ ಸಿವಿಲ್‌ ನ್ಯಾಯಾಲಯವು ಕೋರ್ಟ್‌ ಕಮಿಷನ್‌ ನೇಮಕ ಮಾಡಿರುವುದರಿಂದ ಭೂದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಕೂಡಲೇ ಸರ್ವೇ ಮಾಡಿ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಸುರಪುರ ತಾಲೂಕಿನ ಸಿದ್ದಪ್ಪ ಎಂಬುವವರು ಟ್ರ್ಯಾಕ್ಟರ್‌ ಖರೀದಿಗಾಗಿ ತಂದೆ ಮಾಡಿದ ಸಾಲವನ್ನು ಮನ್ನಾ ಮಾಡಬೇಕೆಂದು 2 ಅರ್ಜಿಗಳನ್ನು ಸಲ್ಲಿಸಿದ್ದರು. ಇದಕ್ಕೆ ಲೀಡ್‌ ಬ್ಯಾಂಕ್‌ ಮತ್ತು ಸುರಪುರ ಕೆನರಾ ಬ್ಯಾಂಕ್‌ ವ್ಯವಸ್ಥಾಪಕರು ಬ್ಯಾಂಕಿನ ನಿಯಮಾವಳಿಗಳಡಿ ಇಂತಹ ಸಾಲ ಮನ್ನಾ ಮಾಡಲು ಅವಕಾಶ ಇಲ್ಲ ಎಂದು ವರದಿ ನೀಡಿರುವ ಪ್ರಯುಕ್ತ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.

Advertisement

ಕೋಟಗೇರಾ ಗ್ರಾಮದ ಮೀನಾಕ್ಷಿ ಗಂಡ ಯೇಸುರಾಜ ಎಂಬುವವರು ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಮೆರಿಟ್‌ ಇಲ್ಲದ ಕಾರಣ ಅರ್ಜಿ ತಿರಸ್ಕರಿಸಲಾಗಿದೆ. ಇನ್ನೊಂದು ನಾರಾಯಣಪುರ
ಗ್ರಾಪಂನಲ್ಲಿ ಒಂದನ್ನು ಬ್ಯಾಕ್‌ಲಾಗ್‌ ಅಂಗವಿಕಲ ಹುದ್ದೆ ಎಂದು ಪರಿಗಣಿಸಿ ಹುದ್ದೆ ನೀಡಲು ಅರ್ಜಿ ಬಂದಿತ್ತು. ಆದರೆ,
ಸರಕಾರದ ಮಟ್ಟದಲ್ಲಿ ಈ ಹುದ್ದೆಗಳನ್ನು ತಡೆ ಹಿಡಿದಿರುವ ಪ್ರಯುಕ್ತ ಅರ್ಜಿ ತಿರಸ್ಕೃತವಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್‌ ವಿ. ಕುಲಕರ್ಣಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾರ್ಯಾಲಯಕ್ಕೆ 3 ಅರ್ಜಿಗಳು ಬಂದಿವೆ. ಇವುಗಳಲ್ಲಿ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಿಂದ ಆಶ್ರಯ ಮನೆಗಾಗಿ 2 ಅರ್ಜಿ, ಅರಕೇರಾ (ಕೆ) ಗ್ರಾಮದ ಅಂಗನವಾಡಿ ಕಟ್ಟಡದ ಪಕ್ಕದಲ್ಲಿ ಗುಂಡಿ ಇದ್ದು, ಅದನ್ನು ಮುಚ್ಚಿ ಆವರಣ ಗೋಡೆ ನಿರ್ಮಿಸುವಂತೆ ಕೋರಿ 1 ಅರ್ಜಿ ಬಂದಿದೆ ಎಂದು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು
ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next