Advertisement
ಗ್ರಾಮದ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಕ್ತರ ನೆರವಿನಲ್ಲಿ ಸತತ 34 ವರ್ಷಗಳಿಂದ ಗಣೇಶ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಮಹೋತ್ಸವದ ಅಂಗವಾಗಿ ಗ್ರಾಮದ ದೇವಾಲಯಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದಿನನಿತ್ಯ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ಮತ್ತು ಗ್ರಾಮದ ಮಕ್ಕಳು ಸಾಂಸ್ಕೃತಿಕರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.
ಆಂಜನೇಸ್ವಾಮಿ, ಹಲಗೆ ದೇವರು, ಹುಲಿವಾಹನ ದೇವರ ಉತ್ಸವ ಮೂರ್ತಿಗಳು ಇದ್ದವು. ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ನಂತರ ಗಣಪತಿ ಮೂರ್ತಿಯನ್ನು ದೊಡ್ಡಕೆರೆಯಲ್ಲಿ ವಿಸರ್ಜಿಸಲಾಯಿತು. ವಿಸರ್ಜನೆಯ ಅಂಗವಾಗಿ ಭಕ್ತರಿಗೆ ಹೆಸರುಬೇಳೆ, ಪಾನಕ, ಮಜ್ಜಿಗೆ, ಅನ್ನಪ್ರಸಾದ ವಿತರಣೆ ನೆರೆವೇರಿತು. ಮೆರವಣಿಗೆಯಲ್ಲಿ ಸಂಘದ ಪದಾಧಿಕಾರಿಗಳಾದ ಭಾಸ್ಕರ, ಯಜಮಾನ ಹೊನ್ನಪ್ಪ, ರೇವಣ್ಣ, ಗ್ರಾಮಪ ಪ್ರಮುಖರಾದ ಅರ್ಕೇಶ್, ನಾಗೇಶ್ ಮುಂತಾದವರು ಭಾಗವಹಿಸಿದ್ದರು.