Advertisement

ಕಲಬುರಗಿಯಲ್ಲಿ ಒಂದೇ ದಿನ 66 ‌ಕೋವಿಡ್ -19 ಸೋಂಕಿತರು ಡಿಸ್ಚಾರ್ಜ್

08:20 PM Jun 10, 2020 | Sriram |

ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್- 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆಯೇ ಬುಧವಾರ ಒಂದೇ ದಿನ ಒಟ್ಟು 66 ಜನ ಪೀಡಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Advertisement

ಮಹಾರಾಷ್ಟ್ರದಿಂದ ವಾಪಸ್ ಆಗಿರುವ ನೂರಾರು ಕೂಲಿ ಕಾರ್ಮಿಕರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿ ಜನತೆ ಆತಂಕಕ್ಕೆ ಕಾರಣವಾಗಿದೆ. ‌ಈ ನಡುವೆ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವುದು ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.

ಚಿತ್ತಾಪುರ ತಾಲೂಕಿನ 29 ಜನರು ಮತ್ತು ಸೇಡಂ ತಾಲೂಕಿನ 13 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ. ಆಳಂದ ತಾಲೂಕಿನ 10 ಜನರು, ಕಾಳಗಿ ಮತ್ತು ಚಿಂಚೋಳಿ ತಾಲೂಕಿನ ತಲಾ 4 ಜನರು, ಕಲಬುರಗಿ ನಗರ ಹಾಗೂ ಕಲಬುರಗಿ ತಾಲೂಕಿನ ತಲಾ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದಂತೆ ಅಫಜಲಪುರ ಮತ್ತು ಕಮಲಾಪುರ ತಾಲೂಕಿನ ತಲಾ ಒಬ್ಬರು ಗುಣಮುಖರಾಗಿದ್ದಾರೆ.

ಈ ಮೂಲಕ ಒಟ್ಟು ಕೋವಿಡ್-19 ಪೀಡಿತ 780 ಜನರಲ್ಲಿ 279 ಜನರು ಗುಣಮುಖರಾದಂತೆ ಆಗಿದೆ. ಎಂಟು ಜನರನ್ನು ಕೋವಿಡ್-19 ಬಲಿ ಪಡೆದಿದೆ. 493 ಸಕ್ರಿಯ ರೋಗಿಗಳಿದ್ದು, ಐಸೋಲೇಷನ್ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next