Advertisement

ಗರ್ಭಪಾತ ನಿಷೇಧ ತಿರಸ್ಕರಿಸಿ

10:12 AM May 21, 2018 | Harsha Rao |

ಲಂಡನ್‌: ಐರ್ಲೆಂಡ್‌ನಲ್ಲಿ ಸಾಕಷ್ಟು ವಿವಾದಕ್ಕೀಡಾಗಿರುವ ಗರ್ಭಪಾತ ನಿಷೇಧ ಕಾನೂನಿನ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಅಲ್ಲಿನ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 25ರಂದು ನಡೆಯಲಿರುವ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ವೇಳೆ, ಆ ಅಮಾನವೀಯ ಕಾನೂನನ್ನು ತೆಗೆದು ಹಾಕುವಂತೆ ಐರ್ಲೆಂಡ್‌ ಜನತೆಗೆ ಬೆಳಗಾವಿಯ ನಿವೃತ್ತ ಎಂಜಿನಿಯರ್‌ ಅಂದಾನಪ್ಪ ಯಾಳಗಿ ಮನವಿ ಮಾಡಿದ್ದಾರೆ. 

Advertisement

ಈ ಹಿನ್ನೆಲೆಯಲ್ಲಿ, ಸುಮಾರು ಒಂದೂವರೆ ನಿಮಿಷದ ವಿಡಿಯೋ ಸಂದೇಶವೊಂದನ್ನು ರವಾನಿಸಿರುವ ಅಂದಾನಪ್ಪ, “ಮಗಳನ್ನು ಕಳೆದುಕೊಂಡ ದುಃಖ ಆರು ವರ್ಷಗಳಾದರೂ ಮಾಸಿಲ್ಲ. ಇಂಥ ಗತಿ ಐರ್ಲೆಂಡ್‌ನ‌ ಯಾವುದೇ ಕುಟುಂಬಕ್ಕೂ ಬರಬಾರದು. ಅದಕ್ಕಾಗಿ ಗರ್ಭಪಾತ ನಿಷೇಧಕ್ಕೆ ವಿರೋಧಿಸಿ ಮತ ಚಲಾಯಿಲು ಆಗ್ರಹಿಸಿದ್ದಾರೆ. ಐರ್ಲೆಂಡ್‌ನ‌ಲ್ಲಿ ನೆಲೆಸಿದ್ದ ಅಂದಾನಪ್ಪ ಪುತ್ರಿ ಸವಿತಾ ಹಾಲಪ್ಪನವರ್‌ರ ಗರ್ಭಪಾತಕ್ಕೆ ಕುಟುಂಬ ಸದಸ್ಯರು ಒತ್ತಾಯಿಸಿದ್ದರು. ಆದರೆ ಅಲ್ಲಿನ ಕಾನೂನು ಅದಕ್ಕೆ ಅವಕಾಶ ಕೊಡದೇ ಇದ್ದುದರಿಂದ  2012ರ ಅ. 28ರಂದು ಮೃತರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next