Advertisement

ಬೆಲೆ ಏರಿಕೆ ಖಂಡಿಸಿ ಮಹಿಳೆಯರ ನಿರಶನ

06:47 PM Mar 09, 2021 | Team Udayavani |

ಕಲಬುರಗಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ ಎಸ್‌) ನೇತೃತ್ವದಲ್ಲಿ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿ, ಅಡುಗೆ ಅನಿಲ ಸಿಲಿಂಡರ್‌ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಸರ್ದಾರ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಎಐಎಂಎಸ್‌ಎಸ್‌ ಸಂಘಟನೆಯ ನಾಯಕಿಯರು, ಸದಸ್ಯರು ಜಮಾವಣೆಗೊಂಡು ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಹಲವಾರು ಸಮಸ್ಯೆ ಎದುರಿಸುವಂತಾಗಿದೆ. ಎರಡು ತಿಂಗಳಿಂದ ನಿರಂತರ ಪ್ರತಿಯೊಂದು ವಸ್ತುಗಳ ಬೆಲೆ ಏರುತ್ತಲೇ ಇದೆ. ಇದರಿಂದ ಮೊದಲು ಹೊಡೆತಕ್ಕೆ ಒಳಾಗುವುದು ಮಹಿಳಾ ಲೋಕ ಎನ್ನುವುದು ಸರ್ಕಾರಗಳು ಮರೆತಿವೆ ಎಂದು ಕಿಡಿಕಾರಿದರು.

ಜನ ವಿರೋಧಿ ಕಾಯ್ದೆಗಳ ವಿರೋಧಿಸಿ ಮೂರು ತಿಂಗಳಿನಿಂದ ರೈತರು ನಡೆಸಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಅಡುಗೆ ಅನಿಲ ಸಿಲಿಂಡರ್‌
ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮವನ್ನು ಸರ್ಕಾರ ಹಿಂಪಡೆಯಬೇಕೆಂದು ಪ್ರತಿಭಟನಾನಿರತ ಮಹಿಳೆಯರು ಆಗ್ರಹಿಸಿದರು.

ಎಐಎಂಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ಕಾರ್ಯದರ್ಶಿ ಮಂಡಳಿ ಸದಸ್ಯೆ ರಾಧಾ, ಗೌರಮ್ಮ ಸಿ.ಕೆ, ರೂಪಾ, ಸಾಬಮ್ಮ, ಮಹಾದೇವಿ,
ಶರಣಮ್ಮ, ಜಯಶ್ರೀ, ರೇಣುಕಾ, ಗೀತಾ, ಕಲಾವತಿ, ಗುಂಡಮ್ಮ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next