ಮೆಲ್ಬೋರ್ನ್: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವನ್ ಸ್ಮಿತ್ ಈ ಬಾರಿಯ ಐಪಿಎಲ್ ಗೆ ಎದುರು ನೋಡುತ್ತಿದ್ದಾರೆ. ಆದರೆ ಇದರ ಮೊದಲು ಇಂಗ್ಲೆಂಡ್ ಸರಣಿ ಆಯೋಜನೆಯಾಗಿದ್ದು, ರಾಜಸ್ಥಾನ ತಂಡದ ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಆರ್ಚರ್ ತಮ್ಮ ಆಟವನ್ನು ಐಪಿಎಲ್ ಗೆ ಕಾಯ್ದಿರಿಸಬೇಕು ಎಂದಿದ್ದಾರೆ.
ಈ ಆಟಗಾರರು ಆಸೀಸ್ ವಿರುದ್ಧವಾಗಿ ಉತ್ತಮವಾಗಿ ಆಡದೆ , ರಾಜಸ್ಥಾನ ರಾಯಲ್ಸ್ ಪರ ಉತ್ತಮವಾಗಿ ಆಡಬೇಕು ಎಂದು ಸ್ಮಿತ್ ತಮಾಷೆಯಾಗಿ ಹೇಳಿದ್ದಾರೆ.
ಸೆ.4ರಿಂದ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ದ ಆಸೀಸ್ ಆಡಲಿದೆ ಎಂದು ವರದಿಯಾಗಿದೆ. ಈ ಸರಣಿ ಐಪಿಎಲ್ ಆರಂಭಿಕ್ಕಿಂತ ಕೇವಲ ನಾಲ್ಕು ದಿನ ಮೊದಲು ಅಂತ್ಯವಾಗಲಿದೆ. ಆದರೆ ಸರಣಿಯ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ.
ಐಪಿಎಲ್ ಭಾರತದಲ್ಲಿ ನಡೆಯುತ್ತಿಲ್ಲ ಎಂದು ಬೇಸರವಿದೆ. ಆದರೆ ವೃತ್ತಿಪರ ಆಟಗಾರನಾಗಿ ಯಾವುದೇ ವಾತಾವರಣಕ್ಕೆ ನಾವು ಹೊಂದಿಕೊಳ್ಳಬೇಕು ಎಂದು ರಾಯಲ್ಸ್ ನಾಯಕ ಹೇಳಿದ್ದಾರೆ.
ಕೋವಿಡ್-19 ಕಾರಣದಿಂದ ಈ ಬಾರಿಯ ಐಪಿಎಲ್ ಭಾರತದಿಂದ ಹೊರಕ್ಕೆ ನಡೆಯಲಿದೆ. ಸೆ.19ರಿಂದ ಯುಎಇ ದೇಶದಲ್ಲಿ ಈ ಬಾರಿಯ ಐಪಿಎಲ್ ಕೂಟ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಇತ್ತೀಚೆಗೆ ಹೇಳಿದ್ದರು.