Advertisement

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಭಟನೆ ಕಣ್ಮರೆ; ಪ್ರೊ|ರೊಡ್ರಿಗಸ್‌

06:40 PM Oct 04, 2022 | Team Udayavani |

ಹೊಸಪೇಟೆ: ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ಪ್ರತಿಭಟನೆ, ಹೋರಾಟಗಳು ಕಣ್ಮರೆಯಾಗುತ್ತಿವೆ ಎಂದು ಅಂಬೇಡ್ಕರ್‌ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ವೆಲೇರಿಯನ್‌ ರೊಡ್ರಿಗಸ್‌ ಕಳವಳ ವ್ಯಕ್ತಪಡಿಸಿದರು.

Advertisement

ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿವೃದ್ಧಿ ರಾಜಕಾರಣ ಮತ್ತು ಪ್ರಜಾಪ್ರಭುತ್ವ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಜನ ಸಾಮಾನ್ಯರು ಭಾರತೀಯ ಸಂವಿಧಾನದ ಮುಖ್ಯ ಆಶಯವಾದ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪಡೆಯುವಲ್ಲಿ ಹಲವಾರು ಬಿಕ್ಕಟ್ಟುಗಳು ಸೃಷ್ಟಿಯಾಗುತ್ತಿವೆ. ಸೀಮಿತವಾದ ಹಿತಾಸಕ್ತಿಗಳನ್ನು ಮುಂದುವರೆಸುವ ಪಾಲಿಟಿಕ್ಸ್‌ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತದಲ್ಲಿ ಪ್ರಜಾಪ್ರಭುತ್ವ ತನ್ನದೇ ಆದ ನೆಲೆಹೊಂದಿದೆ. ಭಾರತದ ಪ್ರಜಾಪ್ರಭುತ್ವಕ್ಕೂ ಪಾಶ್ಚಾತ್ಯ ದೇಶಗಳ ಪ್ರಜಾಪ್ರಭುತ್ವಕ್ಕೂ ಭಿನ್ನತೆಯಿರುವುದು. ನಮ್ಮದು ಸಂಸದೀಯ ಮಾದರಿಯ ಪ್ರಜಾಪ್ರಭುತ್ವವಾಗಿದ್ದು, ವಂಶಪಾರಂಪರಿಕ ಆಳ್ವಿಕೆಗೆ ಇಲ್ಲಿ ಅವಕಾಶವಿಲ್ಲ. ಆಡಳಿತ ವರ್ಗವೂ ಶಾಶ್ವತವಲ್ಲ. ಚುನಾವಣೆಗಳ ಮೂಲಕ ಜನಪ್ರತಿನಿಧಿಗಳು ಆಯ್ಕೆಯಾಗುವ ಪದ್ಧತಿ ಇದೆ. ಅದಕ್ಕಾಗಿ ಸಂವಿಧಾನತ್ಮಕ ಸಂಸ್ಥೆಯು ಕಾಲ-ಕಾಲಕ್ಕೆ ಚುನಾವಣೆಗಳನ್ನು ನಡೆಸುವುದು. ಚುನಾವಣೆಗಳ ಮೂಲಕ ರೂಪುಗೊಂಡ ಆಡಳಿತ ವರ್ಗ ಇಂದು ಸಂವಿಧಾನದ ಮೂಲ ಆಶಯಗಳನ್ನು ಕೆಲಮಟ್ಟಿಗೆ ಕಡೆಗಣಿಸುತ್ತಿರುವುದು ಕಂಡು
ಬರುತ್ತಿದೆ. ಪ್ರಸ್ತುತ ದಿನಗಳಲ್ಲಿ ಮೋದಿ ಮಾದರಿ ದೇಶದಲ್ಲಾದ ಅಪೂರ್ವ ಬೆಳವಣಿಗೆ. ಇದಕ್ಕೆ ಸಾಮಾಜಿಕ ಶಕ್ತಿಗಳು ತುಂಬಾ ಪ್ರೋತ್ಸಾಹ ನೀಡಿವೆ ಎಂದರು.

ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಎಚ್‌.ಡಿ. ಪ್ರಶಾಂತ್‌ ಮಾತನಾಡಿ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ವ್ಯವಸ್ಥೆಯ ಔಪಚಾರಿಕ ಸಂಸ್ಥೆಗಳು ಮತ್ತು ಅನೌಪಚಾರಿಕ ಸಂಸ್ಥೆಗಳು ಎರಡು ಕೂಡ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಇತ್ತಿಚೀನ ದಿನಗಳಲ್ಲಿ 746 ಹೆಕ್ಟೇರ್‌ ಅರಣ್ಯ ಭೂಮಿ ಒತ್ತುವರಿಯಾಗಿರುವುದು ಒಂದು ಕಡೆಯಾದರೆ, ಮತ್ತೂಂದು ಕಡೆ ರೈತರಿಂದ ಭೂಸ್ವಾ ಧೀನ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಎ. ಶ್ರೀಧರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ| ಸಿದ್ದಗಂಗಮ್ಮ ವಂದಿಸಿದರು. ಸಂಶೋಧನಾರ್ಥಿ ಎರಿಸ್ವಾಮಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next