Advertisement

ಜಮೀರ್ ಹೇಳಿಕೆಯನ್ನು ಒಪ್ಪುವುದಿಲ್ಲ, ಅವರು ಕ್ಷಮೆ ಕೇಳಬೇಕು: ಡಿ ಕೆ ಶಿವಕುಮಾರ್

04:13 PM Feb 14, 2022 | Team Udayavani |

ಬೆಂಗಳೂರು: ಹಿಜಾಬ್ ಧರಿಸದಿದ್ದರೆ ಅತ್ಯಾಚಾರಗಳು ಹೆಚ್ಚಾಗುತ್ತವೆ ಎಂಬ ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅವರು ಆ ಮಾತನ್ನು ಹಿಂಪಡೆಯಲು ಹೇಳುತ್ತೇನೆ. ಅವರು ಕ್ಷಮೆ ಕೇಳಬೇಕು. ಈ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದೆ. ಆದರೂ ಕೆಲವರು ಮಾತನಾಡುತ್ತಿದ್ದಾರೆ‌. ಹಾಗಾಗಿ ವಿವರಣೆ ಕೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರ ಮೇಲೆ ಪ್ರಕರಣದ ದಾಖಲಿಸಬೇಕು. ಮಂತ್ರಿಯಾದರೇನು, ಶಾಸಕರಾದರೇನು? ಅವರ ಮೇಲೆ ಮೊದಲು ಪ್ರಕರಣ ದಾಖಲಿಸಿ. ಅವರನ್ನ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಧ್ವಜದ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ನಾವು ಸುಮ್ಮನೆ ಕೂರಲು‌ ಸಾಧ್ಯವೇ. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಖಂಡಿತ ಇದರ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ರಾಷ್ಟ್ರ ಧ್ವಜದ ಬಗ್ಗೆ ಅವಹೇಳನ ಮಾಡುತ್ತಾರೆ. ಅವರು ದೇಶದ್ರೋಹಿಗಳು. ರೈತರ ಮೇಲೆ ಕೇಸ್ ಹಾಕುತ್ತಾರೆ, ಸಣ್ಣ ಪುಟ್ಟವರ ಮೇಲೆ ಕೇಸ್ ಹಾಕುತ್ತಾರೆ, ದೇಶದ್ರೋಹಿಗಳ ಮೇಲೆ ಯಾಕೆ ಕೇಸ್ ಹಾಕುವುದಿಲ್ಲ ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಪರೀಕ್ಷೆ ನಿರಾಕರಿಸಿದವರು ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ : ಸಚಿವ ನಾರಾಯಣ ಗೌಡ

ರಾಜ್ಯದಲ್ಲಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಅನ್ಯಾಯವಾಗುತ್ತಿದೆ. ನಾರಾಯಣಗುರು ವಿಚಾರದಲ್ಲಿ ಅನ್ಯಾಯವಾಗಿದೆ. ಬಿಟ್ ಕಾಯಿನ್, 40% ಕಮೀಷನ್ ಆರೋಪವಿದೆ. ಅದಕ್ಕೆ ಮಕ್ಕಳನ್ನು ಎತ್ತಿ ಕಟ್ಟುತ್ತಿದ್ದಾರೆ. ಹೀಗಾಗಿ ನಾವು ಸದನದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next