ಬೆಂಗಳೂರು: ಇತ್ತೀಚೆಗೆ ಉತ್ತರಪ್ರದೇಶದ ಲಕ್ನೋದಲ್ಲಿ ಮುಗಿದ 5ನೇ ರಾಷ್ಟ್ರೀಯ ದಿವ್ಯಾಂಗರ ಬ್ಯಾಡ್ಮಿಂಟನ್ ಕೂಟದಲ್ಲಿ ಕರ್ನಾಟಕ 9 ಪದಕಗಳನ್ನು ಗೆದ್ದಿದೆ. ಈ ಪೈಕಿ ಕೆ.ಎಂ.ಪಲ್ಲವಿ ಒಬ್ಬರೇ ಮೂರು ಪದಕ ಗೆದ್ದಿದ್ದಾರೆ. ಕೇರಳದ ಆಲ್ಫಿಯಾ ಜೇಮ್ಸ್ ಜತೆಗೂಡಿದ ಪಲ್ಲವಿ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಅಮ್ಮು ಮೋಹನ್-ಆಂಧ್ರಪ್ರದೇಶದ ರೂಪಾ ಪಡಾಲರನ್ನು 21-7, 21-8ರಿಂದ ಮಣಿಸಿ ಚಿನ್ನ ಗೆದ್ದರು. ಇನ್ನು ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ರಾಜ್ಯದ ಅಮ್ಮು ಮೋಹನ್-ಶಶಾಂಕ್ ಕುಮಾರ್ ವಿರುದ್ಧ ಪಲ್ಲವಿ-ಉ.ಪ್ರ.ದ ಅಬು ಹುಬೈದ ಜೋಡಿ ಸೋಲನುಭವಿಸಿತು. ಇಲ್ಲಿ ಪಲ್ಲವಿಗೆ ಕಂಚು ಲಭಿಸಿತು. ರಾಜ್ಯದ ಅಮ್ಮು ಮೋಹನ್ ಒಟ್ಟು ಮೂರು ಬೆಳ್ಳಿ ಪದಕ ಗೆದ್ದರು. ಸಿ.ಮಂಜುನಾಥ್ ಕಂಚು ಗೆದ್ದರು. ಪರೀಕ್ಷಿತ್ ಪ್ರಸಾದ್, ಸುಮಿತ್ ಕುಮಾರ್ ಕಂಚಿನ ಪದಕಗಳನ್ನು ಗೆದ್ದರು.
Advertisement
ದಿವ್ಯಾಂಗರ ರಾಷ್ಟ್ರೀಯ ಬ್ಯಾಡ್ಮಿಂಟನ್: ರಾಜ್ಯಕ್ಕೆ 9 ಪದಕ
11:26 PM Mar 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.