Advertisement

ಧೂಳು ತಿನ್ನುತ್ತಿವೆ ಅಂಗವಿಕಲರ ಟ್ರೈಸಿಕಲ್‌ಗ‌ಳು !    

08:46 PM Oct 03, 2021 | Team Udayavani |

ಮಹಾನಗರ: ದ.ಕ ಜಿಲ್ಲೆಯ ಅಂಗವಿಕಲರಿಗಾಗಿ ಸರಕಾರದಿಂದ ಮಂಜೂರಾದ 58 ತ್ರಿಚಕ್ರ ವಾಹನಗಳು (ಟ್ರೈಸಿಕಲ್‌) ಎರಡೂವರೆ ತಿಂಗಳು ಗಳಿಂದ ಫ‌ಲಾನುಭವಿಗಳ ಕೈ ಸೇರದೆ ಜಿ.ಪಂ. ಕಟ್ಟಡ ಸಮೀಪ ಕೆಟ್ಟು ಹೋಗುವ ಸ್ಥಿತಿಯಲ್ಲಿವೆ.

Advertisement

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಕಳೆದ ಜುಲೈ 12ರಂದು ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮ ಸಾಂಕೇತಿಕವಾಗಿ ನಡೆದಿತ್ತು. ಆದರೆ ಇದುವರೆಗೂ ಫ‌ಲಾನುಭವಿಗಳಿಗೆ ತಲುಪಿಲ್ಲ.

ವಾಹನಗಳ ವಿತರಣೆ ಕಾರ್ಯ ಕ್ರಮವನ್ನು ತರಾತುರಿಯಲ್ಲಿ ನಡೆಸ ಲಾಗಿತ್ತು. ಅನಂತರ ಉತ್ಪಾದನ ಕಂಪೆನಿಯವರಿಂದ ಆರ್‌ಸಿ, ಇನ್ಶೂರೆನ್ಸ್‌ ಮೊದಲಾದ ದಾಖಲೆಗಳನ್ನು ಕೇಳಲಾಗಿದೆ. ಕಂಪೆನಿಯವರು ದಾಖಲೆ ಗಳನ್ನು ಕಳುಹಿಸಿಲ್ಲ. ಹಾಗಾಗಿ ವಾಹನಗಳು ಉಪಯೋಗಕ್ಕೆ ಲಭ್ಯ ವಾಗದೆ ಉಳಿದು ಹೋಗಿವೆ. ಧೂಳು ಹಿಡಿದು ಮುಂದೆ ಕೆಟ್ಟು ಹೋಗುವ ಆತಂಕ ಎದುರಾಗಿದೆ.

ಆರ್‌ಸಿ ಇಲ್ಲದೆಯೇ ರಸ್ತೆಗೆ?
ಇಲಾಖೆಯವರು ಕಂಪೆನಿಯವರಲ್ಲಿ ವಾಹನದ ಆರ್‌ಸಿಗಾಗಿ ಬೇಡಿಕೆ ಇಟ್ಟಾಗ ಕಂಪೆನಿಯವರು “ಇಡೀ ರಾಜ್ಯಕ್ಕೆ ಒಂದೇ ಬಾರಿ ನೀಡುತ್ತೇವೆ’ ಎಂದು ಉತ್ತರಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ:ಧಾರವಾಡದಲ್ಲಿ ಪುರಾತನ ತೀರ್ಥಂಕರ ನಾಲ್ಕು ವಿಗ್ರಹಗಳು ಪತ್ತೆ

Advertisement

ಸದ್ಯ ಇನ್ಶೂರೆನ್ಸ್‌ ದಾಖಲೆ ನೀಡಲು ಮುಂದಾಗಿದ್ದು, ಈ ದಾಖಲೆಯ ಆಧಾರದಲ್ಲಿ ವಾಹನಗಳನ್ನು ವಿತರಿಸಲು ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ ಆರ್‌ಸಿ ಇಲ್ಲದೆ ವಾಹನ ರಸ್ತೆಗಳಿದರೆ ಫ‌ಲಾನುಭವಿಗಳು ಮತ್ತೆ ತೊಂದರೆಗೆ ಒಳಗಾಗುವ ಅಪಾಯವೂ ಇದೆ.

ತಲುಪಿಸಲು ಶೀಘ್ರ ಕ್ರಮ
ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಂಪೆನಿಯವರು ನೀಡದೆ ಇದ್ದುದರಿಂದ ವಾಹನಗಳನ್ನು ಫ‌ಲಾನುಭವಿಗಳಿಗೆ ನೀಡಲು ಸಾಧ್ಯ ವಾಗಿರಲಿಲ್ಲ. ಇದೀಗ ಇನ್ಶೂರೆನ್ಸ್‌ ದಾಖಲೆ ಪಡೆಯಲಾಗಿದ್ದು ಶೀಘ್ರದಲ್ಲೇ ಫ‌ಲಾನುಭವಿಗಳಿಗೆ ವಾಹನ ತಲುಪಿಸಲಾಗುವುದು. ವಾಹನಗಳು ಕೆಟ್ಟು ಹೋಗದಂತೆ ಅವುಗಳ ಬ್ಯಾಟರಿ ತೆಗೆದಿಡಲಾಗಿದೆ. ಹಾಳಾಗದಂತೆ ನೋಡಿಕೊಳ್ಳಲಾಗಿದೆ.
-ಗೋಪಾಲಕೃಷ್ಣ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next