‘ಚಿತ್ರವು ದುಷ್ಟ ವ್ಯಕ್ತಿಯಿಂದ ಅನ್ಯಾಯಕ್ಕೊಳಗಾಗಿದ್ದ ಮಹಿಳೆಯೊಬ್ಬಳ ಮಗ, ಪ್ರತೀಕಾರ ತೀರಿಸಿಕೊಳ್ಳುವ ಕಥೆಯನ್ನು ಹೊಂದಿದೆ. ಈ ಕಥೆಯ ಅಂತ್ಯದಲ್ಲಿ ಹೀರೋ ತನ್ನ ತಾಯಿಗೆ ತಾನು ಕೈಗೊಂಡ ಪ್ರತೀಕಾರವನ್ನು ತಿಳಿಸಿ ಪ್ರಾಣ ಬಿಡಬೇಕು ಎಂದು ನಿರ್ಧರಿಸಿದ್ದೆವು. ಆದರೆ, ತಾಯಿ ಪಾತ್ರಕ್ಕೆ ಆಯ್ಕೆಯಾಗಿದ್ದ ಹಿರಿಯ ನಟಿ ರಾಖೀ ಗುಲ್ಜಾರ್ ಹೀರೋ ಸಾಯುವುದರಿಂದ ಪ್ರೇಕ್ಷಕರಿಗೆ ನಿರಾಸೆ ಆಗಬಹುದು ಎಂದು ಅನುಮಾನಿಸಿದ್ದರಿಂದ ಎರಡು ರೀತಿ ಕ್ಲೈಮ್ಯಾಕ್ಸ್ ಚಿತ್ರೀಕರಿಸಲಾಗಿತ್ತು. ಒಂದರಲ್ಲಿ ಹೀರೋ ಸಾಯುವುದು, ಮತ್ತೂಂದರಲ್ಲಿ ಆತನನ್ನು ಪೊಲೀಸರು ಬಂಧಿಸುವಂತೆ ಚಿತ್ರಿಸಲಾಗಿತ್ತು. ಆದರೆ, ಚಿತ್ರದ ಮೊದಲ ಕಾಪಿ ಬಂದಾಗ ಹೀರೋ ಸಾಯುವ ದೃಶ್ಯವೇ ಹೆಚ್ಚು ತೂಕಬದ್ಧವಾಗಿದ್ದರಿಂದ ಅದನ್ನೇ ಉಳಿಸಿಕೊಳ್ಳಲಾಯಿತು’ ಎಂದು ನಿರ್ದೇಶಕರು ತಿಳಿಸಿದ್ದಾರೆ.
Advertisement