Advertisement
ಸೋಮವಾರ (ಜುಲೈ 22) ತರುಣ್ ಸುಧೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತರುಣ್ ಮತ್ತು ಸೋನಾಲ್ ಅವರ ಮುದ್ದಾದ ವಿಡಿಯೋದ ಜೊತೆಗೆ “ನಾನು ತರುಣ್, ನನ್ನ ನಾಯಕಿ ಸೋನಾಲ್ ಜೊತೆಗಿನ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ” ಎಂದು ಒಕ್ಕಣೆ ಬರೆದಿದ್ದಾರೆ.
Related Articles
Advertisement
ರವಿವಾರ ಇವರಿಬ್ಬರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮೊದಲ ಬಾರಿಗೆ ಊಹಾಪೋಹಗಳನ್ನು ತಣಿಸುವ ಕೆಲಸ ಮಾಡಿದ್ದರು. ತರುಣ್, “ಕೊನೆಗೂ ನಿರ್ದೇಶಕ ತನ್ನ ಜೀವನದ ನಾಯಕಿಯನ್ನು ಕಂಡು ಕೊಂಡರು’ ಎಂದು ಪೋಸ್ಟ್ ಮಾಡಿದ್ದಾರೆ. ಸೋನಾಲ್ ಕೂಡಾ “ಕೊನೆಗೂ ನಾಯಕಿ ತನ್ನ ಜೀವನದ ನಿರ್ದೇಶಕನನ್ನು ಕಂಡುಕೊಂಡಳು’ ಎಂದು ಪೋಸ್ಟ್ ಮಾಡಿದ್ದರು.