Advertisement

ಹಿರಿಯ ನಟ, ನಿರ್ದೇಶಕ ರಾಜಶೇಖರ್‌ ಇನ್ನಿಲ್ಲ

10:24 AM Sep 10, 2019 | Team Udayavani |

ಚೆನ್ನೈ:  ಹಲವು ಯಶಸ್ವಿ ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಶೇಖರ್‌ ರವಿವಾರ ಚೆನ್ನೈನಲ್ಲಿ ಹೃದಯಾಘಾತದಿಂದ ಮೃತರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

Advertisement

ಖ್ಯಾತ ನಿರ್ದೇಶಕ ರಾಬರ್ಟ್‌ ಅಶ್ವಿರ್ವಥಂ ಜೊತೆ ಹಲವು ಚಿತ್ರ ನಿರ್ದೇಶಿಸಿದ್ದ ರಾಜಶೇಖರ್‌, ʼರಾಬರ್ಟ್-ರಾಜಶೇಖರ್‌ʼ ಜೋಡಿಯಾಗಿ ಪ್ರಸಿದ್ದರಾಗಿದ್ದರು.  ʼಪಾಲೈವನಚೋಲೈʼ, ʼಚಿನ್ನಪೂವೇ ಮೆಲ್ಲ ಪೇಸುʼ, ʼಧೂರಂ ಅಧಿಗಮಿಲ್ಲೈʼ, ʼಮನಸುಕ್ಕುಲು ಮತಪ್ಪುʼ, ʼಪರವೈಗಲ್‌ ಪಲಾವಿದಂʼ ಮುಂತಾದ ಹಿಟ್‌ ಚಿತ್ರಗಳನ್ನು ಈ ಜೋಡಿ ಬೆಳ್ಳಿತೆರೆಗೆ ನೀಡಿತ್ತು.

ಬೆಳ್ಳಿತೆರೆಯ ಯಶಸ್ಸಿನ ನಂತರ ಕಿರುತರೆಯಲ್ಲಿ ಕಾಣಿಸಿಕೊಂಡಿದ್ದ ರಾಜಶೇಖರ್‌ ಅಲ್ಲೂ ಯಶಸ್ಸು ಕಂಡಿದ್ದರು. ರಾಜಶೇಖರ್‌ ಅವರ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನ ರವಿವಾರ ಸಂಜೆ ಚೆನ್ನೈನಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next