Advertisement

ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಕನ್ನಡ ಸಿನಿಮಾ ನಿರ್ದೇಶಕ ಪ್ರಶಾಂತ್ ರಾಜ್

04:44 PM May 20, 2021 | Team Udayavani |

ಬೆಂಗಳೂರು : ಕನ್ನಡದ ಖ್ಯಾತ ಸಿನಿಮಾ ನಿರ್ದೆಶಕ ಪ್ರಶಾಂತ್ ರಾಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಸೇರಿದ್ದಾರೆ.

Advertisement

ಇಂದು ತಮ್ಮ ಟ್ವಿಟರಿನಲ್ಲಿ ‘ಆಲ್ ಈಸ್ ವೆಲ್’ ಎಂದು ಕ್ಯಾಪ್ಷನ್ ಜೊತೆಗೆ ಕೃತಕ ಆಕ್ಸಿಜನ್ ಮೂಲಕ ಉಸಿರಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಆನೇಕರು ಆತಂಕ ಪಟ್ಟುಕೊಂಡಿದ್ದು, ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.

ನಿರ್ದೇಶಕ ಪವನ್ ಒಡೆಯರ್, ತರಣ್ ಸುಧೀರ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಶೀಘ್ರ ಗುಣಮುಖರಾಗಿ ಎಂದು ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ಶೇರ್ ಮಾಡುವ ಮೊದಲು ಪ್ರಶಾಂತ್ ರಾಜ್ ಟ್ವೀಟ್ ಮಾಡಿ, ‘ನಾನು ಅಪಾಯದಿಂದ ಪಾರಾಗಿದ್ದೀನಿ. ಎರಡು ದಿನಗಳಲ್ಲಿ ನಾನು ಸಂಪೂರ್ಣವಾಗಿ ಗುಣಮುಖವಾಗುವ ಬಗ್ಗೆ ಖಚಿತವಾಗಲಿದೆ. ಆದಷ್ಟು ಬೇಗ ಹಿಂತಿರುಗುತ್ತೇನೆ. ನನ್ನ ಕೆಲಸವನ್ನು ಪ್ರಾರಂಭಮಾಡುತ್ತೇನೆ’ ಎಂದು ಹೇಳಿದ್ದರು.

Advertisement

ಇನ್ನು ಪ್ರಶಾಂತ್ ರಾಜ್ ಅವರು ಲವ್ ಗುರು, ಗಾನ ಬಜಾನಾ, ಜೂಮ್, ದಳಪತಿ ಮತ್ತು ಆರೆಂಜ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next