ಕೋಲ್ಕತ್ತಾ: ದೇಶದಲ್ಲಿ ಸದ್ಯ ʼದಿ ಕೇರಳ ಸ್ಟೋರಿʼ ಸಿನಿಮಾದ ಚರ್ಚೆಗಳು ಹುಟ್ಟಿಕೊಂಡಿದೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದಿದೆ. ಇದೀಗ ಸತ್ಯ ಘಟನೆಗಳನ್ನು ಇಟ್ಟುಕೊಂಡು ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.
ʼದಿ ಡೈರಿ ಆಫ್ ವೆಸ್ಟ್ ಬೆಂಗಾಲ್ʼ ಎನ್ನುವ ಸಿನಿಮಾ ತೆರೆಗೆ ಬರುವ ಮುನ್ನವೇ ವಿವಾದಕ್ಕೆ ಕಾರಣವಾಗಿದೆ. ಸನೋಜ್ ಮಿಶ್ರಾ ನಿರ್ದೇಶನದ ಸಿನಿಮಾ ಪಶ್ಚಿಮ ಬಂಗಾಳದಲ್ಲಿ ಉಂಟಾದ ಗಲಭೆ, ಘರ್ಷಣೆ, ಸಾಮೂಹಿಕ ಅತ್ಯಾಚಾರ, ಹಿಂದೂಗಳ ಹತ್ಯೆ ರಾಜಕೀಯ ವಿವಾದಗಳ ಸುತ್ತ ಸಾಗುವ ಕಥೆಯನ್ನು ಒಳಗೊಂಡಿದೆ. ಸಿನಿಮಾ ತಂಡ ಇದೊಂದು ಸತ್ಯ ಘಟನೆ ಆಧಾರಿತ ಸಿನಿಮಾವೆಂದು ಹೇಳಿದೆ. ಮೊದಲ ಹಂತವಾಗಿ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದೆ.
ಟ್ರೇಲರ್ ನಲ್ಲಿನ ಕೆಲವೊಂದು ಅಂಶಗಳು ವಿವಾದಕ್ಕೆ ಕಾರಣವಾಗಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಈಗ ಕಾಶ್ಮೀರಗಿಂತ ಕಠೋರವಾಗಿದೆ ಎನ್ನುವ ಡೈಲಾಗ್ ಸೇರಿದಂತೆ ಕೆಲ ಅಂಶಗಳು ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ನಿರ್ದೇಶಕರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಸನೋಜ್ ಮಿಶ್ರಾ ಅವರಿಗೆ ಮೇ.30ರ ಒಳಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ ಹೇಳಿರುವ ಅಂಶಗಳ ಸತ್ಯಾಸತ್ಯತೆಯನ್ನು ತಿಳಿಯಲು ಅವರನ್ನು ವಿಚಾರಣೆ ಮಾಡಲಾಗುವುದೆಂದು ನೋಟಿಸ್ ನೀಡಲಾಗಿದೆ.
Related Articles
ಇದನ್ನೂ ಓದಿ: Bollywood: ಪ್ರಿಯಕರನ ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನೆಟ್ಟಿಗರಿಂದ ಟ್ರೋಲ್
ನನ್ನ ಧ್ವನಿಯನ್ನು ಮೌನಗೊಳಿಸಲಾಗುತ್ತಿದೆ. ಮೇ 30 ರ ಒಳಗೆ ಕೋಲ್ಕತ್ತಾದ ಆಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ನನ್ನನು ಬಂಧಿಸಬಹುದು. ನಾನು ಅಲ್ಲಿಗೆ ಹೋದರೆ ನನ್ನನ್ನು ಬಂಗಾಳದಲ್ಲಿ ಕೊಲ್ಲಬಹುದು” ಎಂದು ʼಇಂಡಿಯಾ ಟುಡೇ” ಗೆ ನಿರ್ದೇಶಕ ಸನೋಜ್ ಮಿಶ್ರಾ ಹೇಳಿದ್ದಾರೆ.
“ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿರುವ ಮಾತನಾಡುವ ಹಕ್ಕನ್ನು ಹತ್ತಿಕ್ಕುವ ಯತ್ನ ನಡೆಸಲಾಗುತ್ತಿದೆ. ನಾನು ಯಾವುದೇ ಅಕ್ರಮ ಮಾಡಿಲ್ಲ. “ನಾನು ದೇಶವಿರೋಧಿಯಲ್ಲ. ನಾನು ಸಮಾಜಕ್ಕಾಗಿ ದುಡಿಯುವ ವ್ಯಕ್ತಿ” ಎಂದು ಅವರು ಹೇಳಿದರು.
“ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಸರಕಾರ ನನ್ನ ವಿರುದ್ಧ ಪ್ರಕರಣ ದಾಖಲಿಸುವ ಬದಲು ಈ ವಿಷಯಗಳತ್ತ ಗಮನ ಹರಿಸಬೇಕು” ಎಂದು ಮಿಶ್ರಾ ಹೇಳಿದರು.
ತಮ್ಮ ಸಿನಿಮಾ ಬಂಗಾಳದ ರಾಜಕೀಯವನ್ನು ಆಧರಿಸಿದ್ದು, ಯಾವುದೂ ಅಕ್ರಮವಲ್ಲ ಎಂದು ಹೇಳಿದ್ದಾರೆ. ಸ್ಕ್ರಿಪ್ಟ್ ಕೆಲವು ನೈಜ ಕಥೆಗಳನ್ನು ಆಧರಿಸಿದೆ ಎಂದು ಅವರು ಹೇಳಿದ್ದಾರೆ.