Advertisement

ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ; ಶೀಘ್ರವೆ ಕಲ್ಯಾಣ

02:35 PM Jul 04, 2021 | Team Udayavani |

ಬೆಂಗಳೂರು : ಆ್ಯಕ್ಟ್-1978 ಸಿನಿಮಾ ಖ್ಯಾತಿಯ ನಿರ್ದೇಶಕ ಮಂಸೋರೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ಅಖಿಲಾ ಎಂಬುವರ ಜೊತೆ ವಿವಾಹವಾಗಲಿದ್ದಾರೆ.

Advertisement

ಇಂದು (ಜುಲೈ 4) ಗುರು ಹಿರಿಯರ ಸಮ್ಮುಖದಲ್ಲಿ ಮಂಸೋರೆ ಹಾಗೂ ಅಖಿಲಾ ಅವರ ನಿಶ್ಚಿತಾರ್ಥ ಕಾರ್ಯ ನೆರವೇರಿತು.

ಮಂಸೂರೆಯವರು ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ಸಿನಿಮಾ ನಿರ್ದೇಶಕರು ಎಂದೆ ಗುರುತಿಸಿಕೊಂಡಿರುವರು. ತಮ್ಮ ಕಲಾತ್ಮಕ ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದವರು. ಇವರ ನಿರ್ದೇಶನದ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ‘ಆ್ಯಕ್ಟ್-1978’ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಹಾಸುಹೊಕ್ಕಿರುವ ಭ್ರಷ್ಟತೆ ಕುರಿತು ಹಿಡಿದ ಕನ್ನಡಿಯಂತಿದೆ.

ನಿರ್ದೇಶಕ ಮಂಸೋರೆ ಅವರು ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಇವರು ನಿರ್ದೇಶಿಸಿರುವ ‘ಹರಿವು’ ಹಾಗೂ ‘ನಾತಿಚರಾಮಿ’ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next