ಹಾಸನ: ಕೊರೊನಾ ಸೋಂಕು ನಿಯಂತ್ರಣ,ಸಾವಿನ ಪ್ರಮಾಣ ತಗ್ಗಿಸಲು ವಿನೂತನಪ್ರಯೋಗಗಳನ್ನು ಕೈಗೊಳ್ಳಿ ಎಂದು ಪ್ರಧಾನಿನರೇಂದ್ರ ಮೋದಿ ಅವರು ಸೂಚನೆನೀಡಿದರು.ಹಾಸನ ಜಿಲ್ಲೆಯೂ ಸೇರಿದಂತೆ ದೇಶದ 46ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಪ್ರಧಾನಿಯವರು, ಜಿಲ್ಲೆಗಳಲ್ಲಿ ವಾರ್‌ರೂಂಗಳನ್ನು ಬಲಪಡಿಸಬೇಕು.
60ವರ್ಷಕ್ಕಿಂತ ಮೇಲ್ಪಟ್ಟ ಕೊರೊನಾ ಸೋಂಕಿತರಬಗ್ಗೆ ವಿಶೇಷ ನಿಗಾ ವಹಿಸಿ ಸೂಕ್ತ ಚಿಕಿತ್ಸೆಒದಗಿಸಬೇಕು. ಆಯುಷ್ ಔಷಧಗಳನ್ನುಸರಿಯಾಗಿ ಉಪಯೋಗಿಸಿಕೊಳ್ಳ ಎಂದುಅಧಿಕಾರಿಗಳಿಗೆ ಸೂಚಿಸಿದರು.
ಚುನಾಯಿತ ಪ್ರತಿನಿಧಿಗಳನ್ನು ಕೊರೊನಾನಿಯಂತ್ರಣ ಹಾಗೂ ಜಾಗೃತಿ ಕಾರ್ಯದಲ್ಲಿಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು. ಲಸಿಕೆನಿರ್ವಹಣೆಯನ್ನು ಪರಿಣಾಮಕಾರಿಯಾಗಿ,ಸರಿಯಾದ ಕ್ರಮದಲ್ಲಿ ನೀಡಬೇಕು. ಪ್ರತಿಗ್ರಾಮದಲ್ಲಿಯೂ ಕೊರೊನಾ ನಿಯಂತ್ರಣಕ್ಕೆಸಂಕಲ್ಪ ಮಾಡಿ ಕಾರ್ಯನಿರ್ವಹಿಸಿ ಎಂದುನಿರ್ದೇಶನ ನೀಡಿದರು.ಪರಿಸ್ಥಿತಿಗನುಗುಣವಾಗಿ ಸ್ಥಳೀಯವಾಗಿಸೂಕ್ತ ನಿರ್ಧಾರಗಳನ್ನು ಕೈಗೊಂಡು ಕಂಟೈನ್‌ಮೆಂಟ್ ಝೋನ್‌ಗಳನ್ನು ಸ್ಥಾಪಿಸಿ ಜನರಿಗೆತೊಂದರೆಯಾಗದಂತೆ ಕಾರ್ಯನಿರ್ವಹಿಸಿಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿರ್ಮೂಲನೆ ಮಾಡಿ: ಜಿಲ್ಲೆಯಲ್ಲಿ ಪಿ.ಎಂ.ಕೇರ್ ಫಂಡ್‌ನಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನುಸ್ಥಾಪಿಸಿ, ಆಮ್ಲಜನಕವನ್ನು ಜವಾಬ್ದಾರಿಯಾಗಿನಿರ್ವಹಣೆ ಮಾಡಿ. ತಮ್ಮ, ತಮ್ಮ ಜಿಲ್ಲೆಯಲ್ಲಿಕೊರೊನಾ ಸಂಪೂರ್ಣ ನಿರ್ಣಾಮ ಮಾಡಿದರೆಅದು ದೇಶದಿಂದಲೇ ತೊಡೆದು ಹಾಕಿದಂತೆಭಾವಿಸಿ ಕೆಲಸ ಮಾಡಿ ಹೇಳಿದರು. ಕೇಂದ್ರ ಗೃಹಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯಸಚಿವಾಲಯದ ಕಾರ್ಯದರ್ಶಿ ರಾಜೇಶ್‌ಭೂಷಣ್ ಅವರು ಮಾತನಾಡಿದರು.
ವೀಡಿಯೋ ಸಂವಾದದ ಸಭೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವ ಕೆ.ಗೋಪಾಲಯ್ಯ,ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್‌ಸಿಂಗ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂಸಿಇಒ ಬಿ.ಎ ಪರಮೇಶ್, ಪೊಲೀಸ್‌ವರಿಷ್ಠಾಧಿಕಾರಿ ಎಸ್ಪಿ ಶ್ರೀನಿವಾಸಗೌಡ, ಅಪರಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿಎಚ್‌ಒಡಾ.ಸತೀಶ್ ಹಾಜರಿದ್ದರು