Advertisement

ವಿದ್ಯಾನಿಧಿ ಹಣ ನೇರ ವರ್ಗಾವಣೆ: ಆದೇಶ

11:03 PM Dec 10, 2021 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ವಿದ್ಯಾನಿಧಿ ಯೋಜನೆಗೆ ಇನ್ನು ಯಾರೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಸರಕಾರದಲ್ಲಿರುವ ರೈತರ ದಾಖಲೆಗಳ ಆಧಾರದಲ್ಲೇ ಫ‌ಲಾನುಭವಿಗಳನ್ನು ಆರಿಸಿ ವಿದ್ಯಾನಿಧಿ ವಿದ್ಯಾರ್ಥಿವೇತನ ನೀಡಲು ಸರಕಾರ ನಿರ್ಧರಿಸಿದೆ.ಈ ಕುರಿತು ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.

Advertisement

ಪ್ರಮುಖವಾಗಿ ರೈತರ ಮಕ್ಕಳು ಎಂದು ಖಾತ್ರಿಪಡಿಸಲು ಅವರ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಎಫ್ಐಡಿ (ರೈತರ ಗುರುತಿನ ಚೀಟಿ) ನೀಡಬೇಕಿದೆ. ವಿದ್ಯಾನಿಧಿ ಯೋಜನೆಯ ಫ‌ಲಾನುಭವಿಗಳಿಗೂ ಈಗಾಗಲೇ ಜಾರಿ ಯಲ್ಲಿರುವ ಇತರ ಸ್ಕಾಲರ್‌ಶಿಪ್‌ ಯೋಜನೆಗಳನ್ನು ನೀಡುವ ಎಸ್‌ಎಸ್‌ಪಿ (ಸ್ಟೇಟ್‌ ಸ್ಕಾಲರ್‌ಶಿಪ್‌ ಪೋರ್ಟಲ್‌) ನಲ್ಲಿಯೇ ಸೇರಿಸಿರುವುದರಿಂದ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಮೆರಿಟ್‌ ಆಧಾರ ದಲ್ಲಿ ವಿದ್ಯಾರ್ಥಿ ವೇತನ ಪಡೆಯುತ್ತಿರುವ ರೈತರ ಮಕ್ಕಳು ಈ ಯೋಜನೆಯಿಂದ ವಂಚಿತರಾಗುತ್ತಿದ್ದರು. ಆದನ್ನು ಬದಲಾಯಿಸಿ ಯಾವುದೇ ರೀತಿಯ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೂ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಒದಗಿಸಲಾಗಿದೆ.

ಕೂಡು ಕುಟುಂಬ ಅಥವಾ ವಿಭಕ್ತ ಕುಟುಂಬವಾಗಿ ದ್ದರೂ, ಜಮೀನು ವಿದ್ಯಾರ್ಥಿಗಳ ತಾತನ ಹೆಸರಲ್ಲಿದ್ದು, ರೈತರ ಮಕ್ಕಳಾಗಿದ್ದರೂ ಅವರಿಗೆ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ನೀಡಲಾಗಿಲ್ಲ. ಕೃಷಿ ಇಲಾಖೆ ಮೂಲ ಗಳ ಪ್ರಕಾರ ರಾಜ್ಯದಲ್ಲಿ ಶೇ. 40ರಷ್ಟು ರೈತ ಕುಟುಂಬಗಳ ಆಸ್ತಿ ತಾತನ ಹೆಸರಿನಲ್ಲಿಯೇ ಇದೆ. ಹೀಗಾಗಿ ತಾತನ ಹೆಸರಿನಲ್ಲಿ ಆಸ್ತಿ ಇದ್ದರೂ, ಅವರ ಕುಟುಂಬದ ವಂಶಾವಳಿ (ಕೃಷಿ ಪದವಿಗೆ ಸಿಇಟಿ ಬರೆಯಲು ಅನುಸರಿಸುತ್ತಿರುವ ಮಾದರಿ) ವ್ಯವಸ್ಥೆಯನ್ನು ಅಳವಡಿಸಿ ರೈತ ಕುಟುಂಬದ ಮೊಮ್ಮಕ್ಕಳಿಗೂ ಯೋಜನೆಯ ಲಾಭ ದೊರೆಯುವಂತೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಕೃಷಿ ಇಲಾಖೆ ತಮ್ಮ ಬಳಿ ಇರುವ ರೈತರ ಡಾಟಾ ಆಧಾರದಲ್ಲಿ ಇಂಥವರನ್ನೂ ಯೋಜನೆ ವ್ಯಾಪ್ತಿಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ತೆರಿಗೆ ಬಾಕಿ ವಿವಾದ: ಮಂತ್ರಿ ಮಾಲ್‌ ಬೀಗ ತೆರೆಯಲು ಪಾಲಿಕೆಗೆ ಹೈಕೋರ್ಟ್‌ ಆದೇಶ

ಅರ್ಜಿಗೂ ಅವಕಾಶ
ಸರಕಾರ ತನ್ನಲ್ಲಿರುವ ರೈತರ ಡಾಟಾ ಆಧಾರದ ಮೇಲೆ ಅವರ ಮಕ್ಕಳಿಗೆ ವಿದ್ಯಾನಿಧಿ ತಲುಪಿಸುವ ಕೆಲಸವನ್ನು ಇಲಾಖೆ ಮಾಡಲಿದೆ. ಒಂದು ವೇಳೆ, ವಿದ್ಯಾರ್ಥಿಗಳು ರೈತರ ಮಕ್ಕಳಾಗಿದ್ದು, ವಿದ್ಯಾನಿಧಿ ಯೋಜನೆ ಸ್ಕಾಲರ್‌ಶಿಪ್‌ ಪಡೆಯಲು ಅರ್ಹರಾಗಿದ್ದೂ, ಬರದೇ ಇದ್ದರೆ, ಅವರು ತಮ್ಮ ಎಲ್ಲ ದಾಖಲೆಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೂಡ ಅವಕಾಶ ನೀಡಲಾಗಿದೆ.

Advertisement

ಮಕ್ಕಳ ಖಾತೆಗೆ ನೇರ ವರ್ಗಾವಣೆ
ರೈತ ರ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬ ಮಾಹಿತಿ ಸರಕಾರದಲ್ಲಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಅರ್ಹತೆ ಪರಿಗಣಿಸಲು ಈಗಿರುವ ದಾಖಲೆಗಳನ್ನೇ ಬಳಸಿ  ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಲು ಇಲಾಖೆ ನಿರ್ಧ ರಿಸಿದೆ. ಪ್ರಸ್ತುತ ಕೃಷಿ ಇಲಾಖೆಯಲ್ಲಿ 1.74 ಲಕ್ಷ ವಿದ್ಯಾ ರ್ಥಿಗಳ ಮಾಹಿತಿಯಿದೆ ಎನ್ನಲಾಗಿದೆ.

ವಿದ್ಯಾನಿಧಿ ಯೋಜನೆಯು ಎಲ್ಲ ಅರ್ಹ ರೈತರ ಮಕ್ಕಳಿಗೆ ತಲುಪಬೇಕು ಎನ್ನುವ ಕಾರಣಕ್ಕೆ ಯೋಜನೆಯ ಅನುಷ್ಠಾನದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸದೆ, ನೇರವಾಗಿ ಸ್ಕಾಲರ್‌ಶಿಪ್‌ ದೊರೆಯಲಿದೆ.
-ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌,
ಕೃಷಿ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next