Advertisement

4.8 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ: ಶೇ.14ರ ಹೆಚ್ಚಳ ಸಾಧನೆ

05:03 PM Dec 09, 2017 | udayavani editorial |

ಹೊಸದಿಲ್ಲಿ : ಹಾಲಿ ಹಣಕಾಸು ವರ್ಷದಲ್ಲಿ ಎಪ್ರಿಲ್‌ – ನವೆಂಬರ್‌ ಅವಧಿಯಲ್ಲಿ 4.8 ಲಕ್ಷ ಕೋಟಿ ರೂ.ಗಳ ನೇರ ತೆರಿಗೆಯನ್ನು ಸಂಗ್ರಹಿಸಲಾಗಿದೆ.

Advertisement

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿಯ ನೇರ ತೆರಿಗೆ ಸಂಗ್ರಹದಲ್ಲಿ  ಶೇ.14.4ರ ಹೆಚ್ಚಳವನ್ನು ಸಾಧಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಹೇಳಿದೆ.

ಮಂಡಳಿಯ ಹೇಳಿಕೆಯ ಪ್ರಕಾರ ನಿವ್ವಳ ತೆರಿಗೆ ಸಂಗ್ರಹವು 2017-18ರ 9.8 ಲಕ್ಷ ಕೋಟಿ ರೂ.ಗಳ ಬಜೆಟ್‌  ನೇರ ತೆರಿಗೆ ಸಂಗ್ರಣೆ ಅಂದಾಜಿನ ಶೇ.49 ಆಗಿರುತ್ತದೆ. 

ಎಪ್ರಿಲ್‌ – ನವೆಂಬರ್‌ 2017ರ ಅವಧಿಯಲ್ಲಿ 1.02 ಲಕ್ಷ ಕೋಟಿ ರೂ.ಗಳನ್ನು ಮರುಪಾವತಿಸಲಾಗಿದೆ ಎಂದು ಮಂಡಳಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.