Advertisement
ನಗರದ “ರಿಜಿನ್’ (ReaGene) ಬಯೋ ಸೈನ್ಸಸ್ ಕಂಪನಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಇದು ಸೇವೆಗೆ ಲಭ್ಯವಾಗಲಿದೆ. ಸಾಮಾನ್ಯವಾಗಿ ಮೊದಲು ನಾಯಿ, ಕೋತಿ ಅಥವಾ ಇಲಿಗಳ ಮೇಲೆ ಔಷಧಗಳ ಪರೀಕ್ಷೆ ನಡೆಸಲಾಗುತ್ತದೆ. ಅದು ಯಶಸ್ವಿಯಾದರೆ, ಮನುಷ್ಯನ ಮೇಲೆ ಪ್ರಯೋಗಿಸಲಾಗುತ್ತದೆ.
Related Articles
Advertisement
ಇದರಿಂದ ಸಮಯ ಉಳಿತಾಯ ಆಗಲಿದೆ ಎಂದು ಹಿರಿಯ ವಿಜ್ಞಾನಿ ಸೀತಾರಾಂ ಕುಲಕರ್ಣಿ ತಿಳಿಸುತ್ತಾರೆ. ವ್ಯಕ್ತಿಯ ಸ್ಟೆಮ್‌ಸೆಲ್‌ಗಳನ್ನು 3ಡಿ ಮಾಡ್ಯುಲ್‌ನ ಬಯೋ ಚಿಪ್‌ನಲ್ಲಿ ಹಾಕಲಾಗುವುದು. ಅದರ ಬೆಳವಣಿಗೆಗೆ ಪೂರಕವಾದ ಕೃತಕ ವಾತಾವರಣ ಸೃಷ್ಟಿಸಲಾಗುವುದು. ಉದಾಹರಣೆಗೆ ಯಕೃತ್‌ಗೆ ಸಂಬಂಧಿಸಿದ ಕಾಯಿಲೆ ಇದ್ದರೆ, ಆ ರೋಗಿಯ ಸ್ಟೆಮ್‌ಸೆಲ್ ಪಡೆದು, ಚಿಪ್‌ನಲ್ಲಿ ಹಾಕಲಾಗುವುದು.
ನಂತರ ಅದರ ಬೆಳವಣಿಗೆಗೆ ಬೇಕಾದ ಅಂಶಗಳನ್ನು ಪೂರೈಸಿ, ಕೃತಕವಾಗಿ ಯಕೃತ್ ಬೆಳೆಸಲಾಗುವುದು. ಅದರ ಬೆಳವಣಿಯನ್ನು ಆಧರಿಸಿ ಔಷಧವನ್ನು ನಿರ್ಧರಿಸಲಾಗುವುದು. ಈ ತಂತ್ರಜ್ಞಾನ ಇನ್ನೂ ಪ್ರಯೋಗ ಹಂತದಲ್ಲಿದ್ದು, ಯುಎಸ್‌ಎಫ್ಡಿಎ (ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ) ಅನುಮೋದನೆ ಪಡೆಯುವುದು ಬಾಕಿ ಇದೆ ಎಂದು ಹೇಳಿದರು.
ಬಯೋ ಇನ್‌ಫಾರ್ಮೇಷನ್ ಸಾಫ್ಟ್ವೇರ್: ವಿದೇಶಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಜಾರಿಯಲ್ಲಿದೆ. ಆದರೆ, ಭಾರತದಲ್ಲಿ ಇಂತಹ ವ್ಯವಸ್ಥೆ ಇನ್ನೂ ಇಲ್ಲ ಎಂದ ಅವರು, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬರುವ ದಿನಗಳಲ್ಲಿ ಹೀಗೆ ಸಂಗ್ರಹಿಸಿದ ಮಾದರಿಗಳ ದತ್ತಾಂಶಗಳನ್ನು ಬಯೋ ಇನ್‌ಫಾರ್ಮೇಷನ್ ಸಾಫ್ಟ್ವೇರ್‌ನಲ್ಲಿ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ.
ಅದನ್ನು ಭಾರತೀಯ ವೈದ್ಯಕೀಯ ಪರಿಷತ್ತಿಗೆ ಸಲ್ಲಿಸಲಾಗುವುದು. ಇದರಿಂದ ವೈದ್ಯರು ಸುಲಭವಾಗಿ ರೋಗಿಗಳಿಗೆ ನಿಖರವಾದ ಔಷಧಿಗಳನ್ನು ಸೂಚಿಸಲು ಅನುಕೂಲ ಆಗಲಿದೆ ಎಂದರು. ದೇಶದ ನೂರಾರು ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳಿದ್ದು, ಅವರೆಲ್ಲರೂ ಪ್ರಾಣಿಗಳ ಮೇಲೆಯೇ ಔಷಧಗಳ ಪ್ರಯೋಗ ಮಾಡುತ್ತಾರೆ.
ಇದರಿಂದ ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಪ್ರಾಣಿಗಳ ಬಲಿ ಆಗುತ್ತದೆ. ಅಲ್ಲದೆ, ನೂರು ಪ್ರಯೋಗಗಳಲ್ಲಿ ಯಾವುದಾದರೂ ಒಂದು ಯಶಸ್ವಿಯಾಗುತ್ತದೆ. ಇದರಿಂದ ಸಮಯ ಮತ್ತು ಶ್ರಮವೂ ವ್ಯಯವಾಗುತ್ತದೆ ಎಂದು ಸೀತಾರಾಂ ಕುಲಕರ್ಣಿ ಹೇಳುತ್ತಾರೆ.
* ವಿಜಯಕುಮಾರ್ ಚಂದರಗಿ