Advertisement
2023-24ನೇ ಸಾಲಿನಲ್ಲಿ ಡಿಪ್ಲೊಮಾ ಪ್ರವೇಶವನ್ನು ಸರಕಾರ ರದ್ದು ಮಾಡಿದ್ದರಿಂದ ಹಿಂದಿನ ಸಾಲಿನಲ್ಲಿ ಯಾವುದೇ ದಾಖಲಾತಿ ಆಗಿರಲಿಲ್ಲ. ಈ ಬಗ್ಗೆ “ಉದಯವಾಣಿ’ ನಿರಂತರವಾಗಿ ಸರಣಿ ವರದಿ ಪ್ರಕಟಿಸಿರುವ ಜತೆಗೆ ಕೃಷಿ ಕಾಲೇಜಿಗೆ ಮಂಜೂರಾತಿ ನೀಡಬೇಕು ಹಾಗೂ ಡಿಪ್ಲೊಮಾ ಕೋರ್ಸ್ ಮರಳಿ ಆರಂಭಿಸಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರುತ್ತ ಬಂದಿತ್ತು. ಇದರ ಜತೆಗೆ ಹಲವು ಸ್ಥಳೀಯ ಸಂಘಟನೆಗಳು ಹೋರಾಟ ನಡೆಸಿ ಡಿಪ್ಲೊಮಾ ಕೋರ್ಸ್ ಪುನರಾರಂಭಕ್ಕೆ ಆಗ್ರಹಿಸಿದ್ದವು.
ಪ್ರಸ್ತುತ ಲಭ್ಯವಿರುವ ಕಟ್ಟಡ, ಮೂಲ ಸೌಕರ್ಯ ಮತ್ತು ಬೋಧನ ಸಿಬಂದಿ ಬಳಸಿಕೊಂಡು ಪುನಃ ಆರಂಭಿಸಲು ವಿಶ್ವವಿದ್ಯಾನಿಲಯವು ಸಲ್ಲಿಸಿದ ಪ್ರಸ್ತಾವನೆಗೆ ಅನುಗುಣವಾಗಿ ಸರಕಾರ ಅನುಮತಿ ಕಲ್ಪಿಸಿದೆ. ಸರಕಾರಕ್ಕೆ ಹೆಚ್ಚುವರು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂಬ ಷರತ್ತು ವಿಧಿಸಿದೆ. 50 ವಿದ್ಯಾರ್ಥಿಗಳಿಗೆ ಪ್ರವೇಶ
ಪ್ರಸಕ್ತ ಸಾಲಿನಲ್ಲಿ 50 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಈ ಬಗ್ಗೆ ಶೀಘ್ರವೇ ವಿ.ವಿ./ ಡಿಪ್ಲೊಮಾ ಕಾಲೇಜಿನಿಂದ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಮೆರಿಟ್ ಆಧಾರದಲ್ಲಿ ಪ್ರವೇಶ ಇರಲಿದೆ. ಕರಾವಳಿಗೆ ಪ್ರತ್ಯೇಕ ಕೋಟಾ ಇರುವುದಿಲ್ಲ. ಸದ್ಯ 20 ಬೋಧಕ ಹಾಗೂ 10 ಬೋಧಕೇತರ ಸಿಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಪ್ರವೇಶಾತಿ ಆಗದೆ ಇರುವುದರಿಂದ ಸದ್ಯ ವಿದ್ಯಾರ್ಥಿಗಳು ಇಲ್ಲ. ಹೊಸ ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ ಕಾಲೇಜು ಬೋಧಕ, ಬೋಧಕೇತರ ಸಿಬಂದಿ ಇದ್ದಾರೆ.
Related Articles
Advertisement