ಸುಪ್ರೀಂ ಕೋರ್ಟ್‌ನ ನಿರ್ದೇಶನ ದಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
Advertisement
ನ. 16ರ ವರೆಗೆ ಮಾತ್ರ ಹಸುರು ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಮಾರ್ಗಸೂಚಿಯಲ್ಲಿ ಸೂಚಿಸಿದ್ದಾರೆ.
Related Articles
Advertisement
ಹಸುರು ಪಟಾಕಿಗಳು ಸ್ಫೋಟಗೊಂಡಾಗ ಹೆಚ್ಚು ಹೊಗೆ ಬಿಡುಗಡೆ ಮಾಡುವ ಬದಲು ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತವೆ. ಈ ಆವಿಯು ಧೂಳು ಮೇಲೇಳದಂತೆ ತಡೆಯುತ್ತದೆ. ಅಲ್ಲದೆ ಇವು ಸಾಮಾನ್ಯ ಪಟಾಕಿಗಳಿಗಿಂತ ಶೇ. 30ಕ್ಕೂ ಕಡಿಮೆ ಮಾಲಿನ್ಯಕಾರಕಗಳನ್ನು ಹೊರಸೂಸುತ್ತವೆ. ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಸದ್ದು ಹೊರಡಿಸುತ್ತವೆ.
ದೇಶದ 230 ಪಟಾಕಿ ತಯಾರಿ ಕಂಪೆನಿಗಳ ಜತೆ ಸಿಎಸ್ಐಆರ್ ಒಪ್ಪಂದ ಮಾಡಿಕೊಂಡಿದೆ. ಆದರೆ ಹಸುರು ಪಟಾಕಿಗಳು ಎಲ್ಲಿ ಲಭ್ಯ ಎನ್ನುವ ಗೊಂದಲ ಗ್ರಾಹಕರಲ್ಲಿ ಇದೆ. ಯಾವುದು ಅಸಲಿ, ಯಾವುದು ನಕಲಿ ಎಂದು ಗುರುತಿಸುವುದೂ ತಿಳಿಯದು. ಹಸುರು ಪಟಾಕಿಗಳ ಪೊಟ್ಟಣಗಳ ಮೇಲೆ ಇರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಪತ್ತೆ ಹಚ್ಚಬಹುದು ಎನ್ನುತ್ತವೆ ವರದಿಗಳು.