Advertisement
ಜೂನ್ 21 ರಿಂದ 27 ರವರೆಗೆ ವಾರದಲ್ಲಿ ಪ್ರತಿದಿನ ಸರಾಸರಿ 61.14 ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗಿತ್ತು, ನಂತರದ ವಾರದಲ್ಲಿ ಜೂನ್ 28 ರಿಂದ ಜುಲೈ 4 ರವರೆಗೆ ಪ್ರತಿದಿನ 41.92 ಲಕ್ಷ ಡೋಸ್ ಗೆ ವ್ಯಾಕ್ಸಿನೇಷನ್ ಪ್ರಮಾಣ ಇಳಿಕೆ ಕಂಡಿದೆ ಎಂದು ಕೋವಿನ್ ಪ್ಲಾಟ್ ಫಾರ್ಮ್ ನಲ್ಲಿನ ಮಾಹಿತಿ ತಿಳಿಸಿದೆ.
Related Articles
Advertisement
ತಾಜಾ ಕೋವಿಡ್ 19 ಪ್ರಕರಣಗಳ ಹೆಚ್ಚಳವನ್ನು ಇತ್ತೀಚೆಗೆ ವರದಿ ಮಾಡಿದ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ, ಸರಾಸರಿ ದೈನಂದಿನ ವ್ಯಾಕ್ಸಿನಷನ್ ಪ್ರಮಾಣ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.
ಇಂದು (ಸೋಮವಾರ, ಜುಲೈ 12) ಸುದ್ದಿ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೇಮದ್ರ ಆರೋಗ್ಯ ಸಚಿವಾಲಯ, ಒಟ್ಟು ಎಲ್ಲಾ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೆಶಗಳಲ್ಲಿ ಇನ್ನೂ ಕೂಡ 1.54 ಕೋಟಿ ಕೋವಿಡ್ 19 ಲಸಿಕಾ ಡೋಸ್ ಗಳು ಲಭ್ಯವಿದೆ ಎಂದು ತಿಳಿಸಿದೆ.
ಈಗಾಗಲೇ ರಾಷ್ಟ್ರೀಯ ಕೋವಿಡ್ 19 ಲಸಿಕಾ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ 37. 73 ಕೋಟಿ ಲಸಿಕೆಯ ಡೋಸ್ ಗಳನ್ನು ದೇಶದಾದ್ಯಂತ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ : ಎಸ್ಎಸ್ಎಲ್ ಸಿ: ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು ಎಂದ ಸುರೇಶ್ ಕುಮಾರ್