Advertisement
ನ. 21ರಂದು ರಾಜ್ಯದ ವಿವಿಧ ಭಾಗಗಳಿಂದ ಒಂದೂವರೆ ಸಾವಿರ ಮಂದಿ ಸ್ವಯಂ ಸೇವಕರು ಆಗಮಿಸಲಿದ್ದಾರೆ. ನ. 23ರಂದು 3,000-3,500 ಮಂದಿ ಆಗಮಿಸುವ ಸಾಧ್ಯತೆ ಇದೆ. ಅವರೆಲ್ಲರಿಗೂ ಊಟದ ವ್ಯವಸ್ಥೆ ಇದೇ ಭೋಜನ ಶಾಲೆಯಲ್ಲಿ ನಡೆಯಲಿದೆ. ಮೂರೂ ದಿನಗಳಲ್ಲಿ ಸಂತರು, ಅವರ ಶಿಷ್ಯಂದಿರು, ಗಣ್ಯ ವ್ಯಕ್ತಿಗಳು ಸೇರಿ 5,000-7,000 ಜನರಿಗೆ ಹಾಗೂ ಪ್ರದರ್ಶಿನಿ ವೀಕ್ಷಣೆಗೆ ಬರಲಿರುವ ಅಂದಾಜು 10,000 ಮಂದಿಗೆ ಭೋಜನ ತಯಾರಾಗಲಿದೆ.
ಉಡುಪಿ: ಧರ್ಮಸಂಸದ್‌ನ ಉಗ್ರಾಣ ಮುಹೂರ್ತ ಸೋಮವಾರ ರೋಯಲ್ ಗಾರ್ಡನ್‌ನಲ್ಲಿ ನಿರ್ಮಾಣ ಗೊಳ್ಳುತ್ತಿರುವ ಭೋಜನಶಾಲೆಯಲ್ಲಿ ನಡೆಯಿತು. ಪೇಜಾವರ ಮಠದ ದಿವಾನರಾದ ರಘುರಾಮಾಚಾರ್ಯ ಉಗ್ರಾಣ ಮುಹೂರ್ತ ನೆರವೇರಿಸಿದರು.
Related Articles
Advertisement
ಏನೇನು ಖಾದ್ಯಗಳು…ಪ್ರತಿದಿನವೂ ವಿವಿಧ ಬಗೆಯ ಖಾದ್ಯಗಳು ಈ ಪಾಕಶಾಲೆಯಲ್ಲಿ ತಯಾರಾಗಲಿವೆ. ಉತ್ತರ ಭಾರತದ ಅನೇಕ ಸಾಧು ಸಂತರು ಆಗಮಿಸುವರಾದ್ದರಿಂದ ಉತ್ತರ ಹಾಗೂ ದಕ್ಷಿಣ ಭಾರತದ ಖಾದ್ಯಗಳೂ ಇರುತ್ತವೆ. ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ, ದೋಸೆ, ಶೀರಾ, ವಡೆ ಚಟ್ನಿ, ದೋಸೆ, ಉಪ್ಪಿಟ್ಟು, ಕಾರ್ಕಳ ಕೇಕ್ ಹಾಗೂ ಮಧ್ಯಾಹ್ನದ ಭೋಜನಕ್ಕೆ ಉಪ್ಪಿನಕಾಯಿ, ರೋಟಿ, ದಾಲ್, ಮಿಕ್ಸಿಂಗ್ ವೆಜ್ ಕರಿ, ಚಪಾತಿ, ಸಬ್ಜಿ, ಕೂರ್ಮ, 2 ಬಗೆಯ ಸ್ವೀಟ್ಸ್, ಪಾಯಸ, ಮೊಸರು, ಮಜ್ಜಿಗೆ ಇರಲಿದೆ. ನ. 26: ಅಲ್ಲಲ್ಲಿ ಊಟದ ವ್ಯವಸ್ಥೆ
ಧರ್ಮಸಂಸದ್‌ನ ಕೊನೆಯ ದಿನ ನ. 26ರಂದು ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವಕ್ಕೆ ಮೂರು ಕಡೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ, ಬೈಂದೂರು ಮೊದಲಾದ ಭಾಗಗಳಿಂದ ಬರುವವರಿಗೆ ಅಂಬಾಗಿಲು ಎಲ್‌ವಿಟಿ ಮುಂಭಾಗದಲ್ಲಿ, ಕಾರ್ಕಳ, ಬೆಳ್ತಂಗಡಿ, ಮೂಡಬಿದಿರೆ ಕಡೆಯಿಂದ ಬರುವವರಿಗೆ ಹಿರಿಯಡಕದಲ್ಲಿ ಹಾಗೂ ಮಂಗಳೂರು ಭಾಗದಿಂದ ಆಗಮಿಸುವವರಿಗೆ ಉದ್ಯಾವರದಲ್ಲಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.