Advertisement
ಇದುಕಪಿಲ್ ಸಿಬಲ್ ಹುಟ್ಟುಹಬ್ಬದ ಆಚರಣೆಯಾಗಿದ್ದರೂ, ಈ ಸಭೆಯು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ತಂತ್ರಗಾರಿಕೆಯ ಕೇಂದ್ರವಾಯಿತು. ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಪಡಿಸಯವ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಗಾಂಧಿ ಕುಟುಂಬಿಕರನ್ನು ನಾಯಕತ್ವದ ಹಿಡಿತದಿಂದ ಮುಕ್ತಗೊಳಿಸಿದರೆ ಮಾತ್ರ ಇದು ಸಾಧ್ಯ ಎಂದು ಕೆಲವು ನಾಯಕರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಂದರ್ಭದಲ್ಲಿ ಗಾಂಧಿ ಕುಟುಂಬಿಕರು ಭಾಗವಹಿಸಿರಲಿಲ್ಲ.
Related Articles
Advertisement
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಶಿವಸೇನೆಯ ಸಂಜಯ್ ರಾವತ್, ಎನ್ ಸಿಪಿಯ ಶರದ್ ಪವಾರ್, ತೃಣಮೂಲದ ಡೆರೆಕ್ ಒಬ್ರೈನ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ ಸೇರಿದಂತೆ ವಿರೋಧ ಪಕ್ಷದ ನಾಯಕರು ಹಾಜರಿದ್ದರು.
ಈ ಹಿಂದೆ ಎನ್ ಡಿಎ ಭಾಗವಾಗಿದ್ದ ಅಕಾಲಿದಳವನ್ನು ಕೂಡ ಸಭೆಗೆ ಆಹ್ವಾನಿಸಲಾಗಿತು. ಅಕಾಲಿ ದಳ ಪಕ್ಷದ ಹಿರಿಯ ನಾಯಕ ನರೇಶ್ ಗುಜ್ರಾಲ್ ಹಾಜರಿದ್ದರು. ನವೀನ್ ಪಟ್ನಾಯಕ್ ಅವರ ಬಿಜು ಜನತಾದಳದಿಂದ ಪಿನಾಕಿ ಮಿಶ್ರಾ ಕೂಡ ಭಾಗವಹಿಸಿದ್ದರು.
ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್ ಯಾವಾಗ ಪ್ರಬಲವಾಗಿದೆಯೋ ಆಗ ಪ್ರತಿಪಕ್ಷಗಳು ಬಲಗೊಳ್ಳುತ್ತವೆ ಮತ್ತು ಪಕ್ಷವನ್ನು ಬಲಪಡಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಮತ್ತು ಇತರ ವಿರೋಧ ಪಕ್ಷಗಳು ಕಾಂಗ್ರೆಸ್ ಅನ್ನು ಬಲಪಡಿಸಲು ನಾಯಕತ್ವದಲ್ಲಿ ಬದಲಾವಣೆಯನ್ನು ಮಾಡಬೇಕು ಎಂದು ಸೂಚಿಸಿದರು. ಆದಾಗ್ಯೂ, ಹಲವು ನಾಯಕರು ರಾಹುಲ್ ಗಾಂಧಿಯ ಪುನರಾಗಮನಕ್ಕಾಗಿ ಒತ್ತಾಯಿಸುತ್ತಿದ್ದಾರೆ.