Advertisement

ದಿನೇಶ್‌ ಕಾರ್ತಿಕ್‌ ಕಮೆಂಟೇಟರ್‌! ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ ವೇಳೆ ವೀಕ್ಷಕ ವಿವರಣೆ

11:34 PM May 24, 2021 | Team Udayavani |

ಹೊಸದಿಲ್ಲಿ: ಇನ್ನೂ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವಾಗಲೇ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಕಮೆಂಟ್ರಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ ವೇಳೆ ಕಾರ್ತಿಕ್‌ ವೀಕ್ಷಕ ವಿವರಣೆ ನೀಡಲಿದ್ದಾರೆ.

Advertisement

ಈ ಪಂದ್ಯದ ಕಮೆಂಟ್ರಿ ತಂಡವನ್ನು ಪ್ರಕಟಿಸಲಾಗಿದ್ದು, ಲೆಜೆಂಡ್ರಿ ಬ್ಯಾಟ್ಸ್‌ಮನ್‌ ಸುನೀಲ್‌ ಗಾವಸ್ಕರ್‌ ಭಾರತದ ಮತ್ತೋರ್ವ ವೀಕ್ಷಕ ವಿವರಣಕಾರರಾಗಿದ್ದಾರೆ. ನ್ಯೂಜಿಲ್ಯಾಂಡ್‌ ಕಡೆಯಿಂದ ಸೈಮನ್‌ ಡೂಲ್‌ ಇದ್ದಾರೆ. ತಟಸ್ಥ ಕಮೆಂಟೇಟರ್‌ಗಳಾಗಿ

ಇಂಗ್ಲೆಂಡಿನ ಮೈಕ್‌ ಆಥರ್ಟನ್‌ ಮತ್ತು ನಾಸಿರ್‌ ಹುಸೇನ್‌ ಕರ್ತವ್ಯ ನಿಭಾಯಿಸಲಿದ್ದಾರೆ.
ಇಂಗ್ಲೆಂಡಿಗೆ ಬಂದ ಬಳಿಕ 10 ದಿನಗಳ ಕಠಿನ ಕ್ವಾರಂಟೈನ್‌ಗೆ ಒಳಗಾಗಬೇಕಿದ್ದರಿಂದ ಅನೇಕ ವೃತ್ತಿಪರ ವೀಕ್ಷಕ ವಿವರಣಕಾರರು ಈ ಪಂದ್ಯದಿಂದ ದೂರ ಸರಿಯಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ. ಹೀಗಾಗಿ ದಿನೇಶ್‌ ಕಾರ್ತಿಕ್‌ ಅವರಿಗೆ ಅವಕಾಶ ಒಲಿದು ಬಂತು.

35 ವರ್ಷದ ದಿನೇಶ್‌ ಕಾರ್ತಿಕ್‌ ಅನಂತರದ “ದಿ ಹಂಡ್ರೆಡ್‌’ ಕ್ರಿಕೆಟ್‌ ಸರಣಿಯಲ್ಲೂ ಕಮೆಂಟ್ರಿ ನೀಡಲಿದ್ದಾರೆ. ಹೀಗಾಗಿ ಅವರು ಮುಂಬರುವ ಶ್ರೀಲಂಕಾ ಪ್ರವಾಸದ ವೇಳೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದೂರಗೊಂಡಂತಾಯಿತು.
ದಿನೇಶ್‌ ಕಾರ್ತಿಕ್‌ 2018ರ ಇಂಗ್ಲೆಂಡ್‌ ಪ್ರವಾಸದ ವೇಳೆ ಲಾರ್ಡ್ಸ್‌ನಲ್ಲಿ ಕೊನೆಯ ಟೆಸ್ಟ್‌ ಆಡಿದ್ದರು. ಅನಂತರ ಇವರ ಸ್ಥಾನಕ್ಕೆ ರಿಷಭ್‌ ಪಂತ್‌ ಲಗ್ಗೆ ಇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next