Advertisement
ಪಂಜಾಬ್ ಎದುರಿನ ಚೇಸಿಂಗ್ ವೇಳೆ, ಆರ್‌ಸಿಬಿಗೆ ಕೊನೆಯ 3 ಓವರ್‌ಗಳಲ್ಲಿ 36 ರನ್ ತೆಗೆಯುವ ಕಠಿನ ಸವಾಲು ಎದುರಾಗಿತ್ತು. ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಜತೆ ಕ್ರೀಸ್‌ನಲ್ಲಿದ್ದವರು ಇಂಪ್ಯಾಕ್ಟ್ ಪ್ಲೇಯರ್ ಮಹಿಪಾಲ್ ಲೊಮ್ರೋರ್. ಇವರು ಯಶ್ ದಯಾಳ್ ಬದಲು ಆಡಲಿಳಿದಿದ್ದರು.
Related Articles
Advertisement
ವಿದೇಶಿಗರ ವೈಫಲ್ಯ
ಮೊದಲೆರಡು ಪಂದ್ಯಗಳಲ್ಲಿ ಗಮನಿಸಿದಂತೆ ಆರ್‌ಸಿಬಿಯ ವಿದೇಶಿ ಕ್ರಿಕೆಟಿಗರು ಭಾರೀ ವೈಫಲ್ಯ ಕಾಣುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್, ಅನುಜ್ ರಾವತ್, ಮಹಿಪಾಲ್ ಲೊಮ್ರೋರ್ ಅವರಂಥ ಕೆಳ ಕ್ರಮಾಂಕದ ಆಟಗಾರರು ರನ್ ಗಳಿಸುತ್ತಿರುವುದು ಆರ್‌ಸಿಬಿಯ ಹೆಚ್ಚುಗಾರಿಕೆ ಎನ್ನಬಹುದು.
ಆರ್‌ಸಿಬಿಯ ವಿದೇಶಿ ಕ್ರಿಕೆಟಿಗರ “ಸಾಧನೆ’ಯನ್ನೊಮ್ಮೆ ಗಮನಿಸಿ. ಮೊದಲ ಪಂದ್ಯದಲ್ಲಿ ನಾಯಕ ಫಾ ಡು ಪ್ಲೆಸಿಸ್ 35 ರನ್ ಮಾಡಿದರೂ ಪಂಜಾಬ್ ವಿರುದ್ಧ ಮೂರೇ ರನ್ನಿಗೆ ಆಟ ಮುಗಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಎರಡೂ ಪಂದ್ಯಗಳಲ್ಲಿ ಠುಸ್ ಆಗಿದ್ದಾರೆ. ಚೆನ್ನೈ ವಿರುದ್ಧ ಗೋಲ್ಡನ್ ಡಕ್ ಸಂಕಟವಾದರೆ, ಪಂಜಾಬ್ ವಿರುದ್ಧ ಗಳಿಸಿದ್ದು 3 ರನ್ ಮಾತ್ರ.
ತಂಡದ ಪಾಲಿನ ದೊಡ್ಡ ಭರವಸೆಯಾಗಿದ್ದ ಕ್ಯಾಮರಾನ್ ಗ್ರೀನ್ ಗಳಿಸಿದ್ದು 18 ಮತ್ತು 3 ರನ್ ಮಾತ್ರ. ಪಂಜಾಬ್ ವಿರುದ್ಧ ಇವರನ್ನು ವನ್‌ಡೌನ್‌ನಲ್ಲಿ ಕಳುಹಿಸಿದ ಪ್ರಯೋಗ ಯಶಸ್ವಿಯಾಗಲಿಲ್ಲ.
ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಯಾವುದೇ ಪರಿಣಾಮ ಬೀರಿಲ್ಲ. ಜತೆಗೆ ಭಾರೀ ದುಬಾರಿಯೂ ಆಗುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 3.4 ಓವರ್‌ಗಳಿಂದ 38 ರನ್ ನೀಡಿ ವಿಕೆಟ್ ಲೆಸ್ ಎನಿಸಿದರು. ಪಂಜಾಬ್ ವಿರುದ್ಧ ಒಂದು ವಿಕೆಟ್ ಕೆಡವಲು 43 ರನ್ ನೀಡಿದರು.