Advertisement
ಮಂಗಳವಾರ ನೀಡಿದ ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ಪೂರ್ಣವಾಗಿ ಮಾಹಿತಿ ನೀಡಿಲ್ಲ. ಸಂತ್ರಸ್ತೆ ಬಗ್ಗೆಯಾಗಲಿ, ಆಕೆಯ ಕುಟುಂಬ ಸದಸ್ಯರ ಬಗ್ಗೆಯಾಗಲಿ ಅಥವಾ ಕೃತ್ಯ ಎಲ್ಲೆಲ್ಲಿ ನಡೆದಿದೆ ಎಂಬ ಕುರಿತು ಉಲ್ಲೇಖೀಸಿಲ್ಲ. ಮತ್ತೂಂದೆಡೆ ವಿಚಾರಣೆ ಸಂದರ್ಭದಲ್ಲೂ ಪೂರ್ಣಮಾಹಿತಿ ನೀಡಲಿಲ್ಲ. ಈ ಹಿನ್ನೆಲೆ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು.
ವೀಡಿಯೋದ 10 ನಿಮಿಷದ ತುಣುಕು ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಯುಟ್ಯೂಬ್ ಚಾನೆಲ್ನಲ್ಲಿ ಅಪ್ ಲೋಡ್ ಆಗಿದೆ. ದಿನೇಶ್ ಕಲ್ಲಹಳ್ಳಿ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರ ಜತೆ ತಾಂತ್ರಿಕ ತನಿಖೆ ನಡೆಸಿದಾಗ ಈ ಮಾಹಿತಿ ಬಹಿರಂಗವಾಗಿದೆ. ಆದರೆ, ಈ ಯುಟ್ಯೂಬ್‌ನ ಐಪಿ ವಿಳಾಸ ಪತ್ತೆ ಹಚ್ಚಿದಾಗ ಅದು ರಷ್ಯಾದಲ್ಲಿ ತೋರಿಸುತ್ತಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ, ತಾಂತ್ರಿಕವಾಗಿ ಹೆಚ್ಚಿನ ಜ್ಞಾನ ಹೊಂದಿರುವ ವ್ಯಕ್ತಿಗಳೇ ಪ್ರಭಾವಿಗಳ ಜತೆ ಸೇರಿ ಈ ಕೃತ್ಯ ಎಸಗಿದ್ದಾರೆ. ಆದರೆ, ಯಾವ ಖಾತೆಯಿಂದ ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದು ಪತ್ತೆಯಾಗಿಲ್ಲ. ನಕಲಿ ಖಾತೆ ಸೃಷ್ಟಿಸಿಯೂ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ :ರಾಜಕೀಯ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್ : ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್
Related Articles
ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಎನ್.ಪುಟ್ಟೇಗೌಡ ಬುಧವಾರ ದೂರುದಾರ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ ದಿನೇಶ್ ವಿರುದ್ಧ ಕ್ರಮಕೈಗೊಳ್ಳಬೇಕು. ಸಂತ್ರಸ್ತೆಯೇ ಸಂಪೂರ್ಣವಾಗಿ ಸಮ್ಮತಿಯಿಂದಲೇ ವೀಡಿಯೋ ಕಾಲ್ ಮಾಡಿದ್ದಾರೆ ಮತ್ತು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಆದ್ದರಿಂದ ವೀಡಿಯೋ ಚಿತ್ರೀಕರಿಸಿದ ವ್ಯಕ್ತಿಗಳು ಮತ್ತು ದಿನೇಶ್ ಕಲ್ಲಹಳ್ಳಿ ವಿರುದ್ಧ ಕ್ರಮ ಕೈಗೊಳ್ಳೂಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಇನ್ನೂ ಎಫ್ಐಆರ್ ಆಗಿಲ್ಲರಮೇಶ್ ಜಾರಕಿಹೊಳಿ ಕುರಿತು ದೂರು ನೀಡಿ 24 ಗಂಟೆ ಕಳೆದರೂ ಇದುವರೆಗೂ ಎಫ್ಐಆರ್ ದಾಖಲಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಗಳು, ದೂರುದಾರ ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನಲ್ಲಿ ಅಸ್ಪಷ್ಟ ಮಾಹಿತಿಗಳಿವೆ. ಹೀಗಾಗಿ ಎಫ್ಐಆರ್ ದಾಖಲಿಸಿಲ್ಲ. ಗುರುವಾರ ದಿನೇಶ್ ನೀಡುವ ಮಾಹಿತಿಗಳನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದರು.