Advertisement

ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕಷ್ಟೇ ಹೋರಾಟ ನಿಲ್ಲುವುದಿಲ್ಲ

07:36 PM Mar 04, 2021 | Team Udayavani |

ರಾಮನಗರ: ನನ್ನ ಹೋರಾಟ ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕಷ್ಟೇ ನಿಲ್ಲುವುದಿಲ್ಲ. ಸಚಿವ ಸಂಪುಟದಲ್ಲಿರುವವರು ಹಾಗೂ ಪ್ರಭಾವಿ ನಾಯಕರ ಗಂಭೀರವಾದ ಅಕ್ರಮ ಪ್ರಕರಣಗಳೂ ನನ್ನ ಬಳಿ ಇವೆ. ಅದನ್ನು ಸದ್ಯಕ್ಕೆ ಬಹಿರಂಗ ಪಡಿಸುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಳ್ಳಿ ತಿಳಿಸಿದರು.

Advertisement

ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಮೇಶ್‌ ಜಾರಕಿಹೊಳಿ ರಾಸ ಲೀಲೆ ಪ್ರಕರಣವನ್ನು ಪೊಲೀಸ್‌ ಅಥವಾ ನ್ಯಾಯಾಂಗ ತನಿಖೆಗಳ ಬದಲಿಗೆ ಸ್ವತಂತ್ರ ತನಿಖಾ ಸಂಸ್ಥೆ ಗಳಿಂದ ನಡೆಸುವಂತೆ ತಾವು ರಾಜ್ಯ ಉತ್ಛನ್ಯಾಯಾಲಯ ಅಥವಾ ಸರ್ವೋತ್ಛ ನ್ಯಾಯಾಲಯದಲ್ಲಿ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.

ಹೈಕೋರ್ಟ್‌ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸುವಂತೆ ಕೆಲವರು ಆಗ್ರಹಿಸಿರುವುದು ಅವರು, ತಾವು ಮಾತ್ರ ಸ್ವತಂತ್ರ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಯಲಿ ಎಂದು ನ್ಯಾಯಾಲದ ಮೊರೆ ಹೋಗುವು ದಾಗಿ ಹೇಳಿದರು.

ರಮೇಶ್‌ ಜಾರಕಿಹೋಳಿ ಅವರು ರಾಜೀನಾಮೆ ನೀಡಿದ್ದಾರೆ. ಪ್ರಕರಣದಲ್ಲಿ ವಾಸ್ತವಾಂಶವಿದೆ ಎಂದು ಮುಖ್ಯ ಮಂತ್ರಿಗಳಿಗೂ ಮನವರಿಕೆಯಾಗಿದೆ. ಹೀಗಾಗಿ ಅವರು ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಸಿಎಂಗೆ ಈ ವಿಚಾರದಲ್ಲಿ ಅಭಿನಂದನೆ ಸಲ್ಲಿಸುವುದಾಗಿ, ಪಾರದರ್ಶ ತನಿಖೆಗೆ ರಾಜೀನಾಮೆ ನೀಡಿರುವುದು ಸಹಾಯಕ ಎಂದರು. ಪೊಲೀಸ್‌ ಆಯುಕ್ತರಿಗೆ ಸಿಡಿ ನೀಡಿರುವುದು ತನಿಖೆಯ ಭಾಗವಾಗಿದೆ ಎಂದರು.

ಬಹಿರಂಗ ಪಡಿಸಲು ಸಾಧ್ಯ ವಿಲ್ಲ: ಇದೊಂದು ಅತಿ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಸಿಡಿಯಲ್ಲಿರುವ ಯುವತಿ ಯಾರೆಂಬುದು ಸೇರಿದಂತೆ ಕೆಲವು ವಿಚಾರಗಳನ್ನು ಬಹಿರಂಗ ಪಡಿಸಲು ಸಾಧ್ಯ ವಿಲ್ಲ. ತನಿಖೆಯ ವೇಳೆ ಎಲ್ಲವನ್ನು ಬಹಿರಂಗ ಪಡಿಸುವುದಾಗಿ ಹೇಳಿದರು.

Advertisement

ಯುವತಿಗೆ ನ್ಯಾಯ ಸಿಗಬೇಕೆಂಬುದೇ ತಮ್ಮ ಹೋರಾಟದ ಉದ್ದೇಶ. ತನಿಖೆಯ ಮೇಲೆ ಪ್ರಭಾವಿ ವ್ಯಕ್ತಿ ರಮೇಶ್‌ ಜಾರಕಿಹೋಳಿ ಪ್ರಭಾವ ಬೀರುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next