Advertisement

ಬಂದದ್ದು ಬರೇ ನೆರೆಯಲ್ಲ, “ಜಲಸ್ಫೋಟ’: ದಿನೇಶ್‌ ಹೊಳ್ಳ

11:45 PM Sep 21, 2019 | Team Udayavani |

ಉಡುಪಿ: ಸರಕಾರದ ಅವೈಜ್ಞಾನಿಕ ಯೋಜನೆಗಳಿಂದಾಗಿ ಕಳೆದ 25 ವರ್ಷಗಳಿಂದ ಪಶ್ಚಿಮ ಘಟ್ಟ ನಶಿಸುತ್ತಿದೆ. ಇದೇ ಕಾರಣಕ್ಕಾಗಿ ಈ ಬಾರಿ ನೆರೆಯಾಗಿದೆ. ಆದರೆ ಇದು ಮಾಮೂಲಿ ನೆರೆಯಲ್ಲ ಜಲನ್ಪೋಟ ಎಂದು ಪರಿಸರ ತಜ್ಞ ದಿನೇಶ್‌ ಹೊಳ್ಳ ಅಭಿಪ್ರಾಯಪಟ್ಟರು.

Advertisement

ಪತ್ರಿಕಾಭವನದಲ್ಲಿ ಶನಿವಾರ ಮಾಧ್ಯಮದ ವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೆಸಾರ್ಟ್‌, ಹೋಂಸ್ಟೇ, ಜಲವಿದ್ಯುತ್‌ ಸಹಿತ ಪರಿಸರಕ್ಕೆ ಮಾರಕವಾಗುವ ಯೋಜನೆಗಳಿಂದ ಈ ರೀತಿಯ ಅವಘಡಗಳು ಉಂಟಾಗುತ್ತಿವೆ. ಜಿಲ್ಲೆಯಲ್ಲಿ ನೆರೆಬಂದು ತಿಂಗಳು ಕಳೆದರೂ ಯಾವುದೇ ಸಮರ್ಪಕ ವರದಿ ನೀಡಿಲ್ಲ. ಒಂದೆಡೆ ಪರಿಸರ ಪೋಷಣೆ ಹೆಸರಿನಲ್ಲಿ ನಾಟಕವಾಡಿ ಮತ್ತೂಂದೆಡೆ ಮಾಫಿಯಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾನವ ಚಟುವಟಿಕೆಗಳು ಮಿತಿಮೀರಿದ ಕಾರಣ ಇಂತಹ ಘಟನೆಗಳು ಸಂಭವಿಸುತ್ತವೆ ಎಂದರು.

ಬರಪೀಡಿತ ಜಿಲ್ಲೆಯಿಂದ
ನೀರು ಸರಬರಾಜು ಯತ್ನ!
ಕಳೆದ ವರ್ಷ ದ.ಕ. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಮತ್ತೂಂದೆಡೆ ಎತ್ತಿನಹೊಳೆ ಯೋಜನೆ ಮೂಲಕ ಇದೇ ಬರಪೀಡಿತ ಜಿಲ್ಲೆಯಿಂದ ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜು ಮಾಡುವ ಕೆಲಸ ನಡೆಯುತ್ತಿದೆ. ಜಿಲ್ಲೆಗೆ ಬರತಟ್ಟಲು ಪಶ್ಚಿಮಘಟ್ಟವನ್ನು ವ್ಯಾವಹಾರಿಕವಾಗಿ ಮಾಡಿರುವುದೇ ಕಾರಣವಾಗಿದೆ ಎಂದರು.

ಕಾಳಿಚ್ಚಾ ಕಾರಣ
ಚಾರಣಕ್ಕೆ ಬರುವವರು ಹಾಕುವ ಕ್ಯಾಂಪ್‌ ಫೈರ್‌ಗಳಿಂದ ಕಳೆದ 4 ವರ್ಷಗಳಲ್ಲಿ 1 ಬೆಟ್ಟದ ಮೇಲೆ 4 ಬಾರಿ ಕಾಳಿYಚ್ಚು ನಡೆದಿದೆ. ಇದರಿಂದಾಗಿ ಹುಲ್ಲುಗಾವಲು ಚಿಗುರಲು ಅವಕಾಶ ಇರದೆ ಭೂಕುಸಿತ ನಡೆಯುತ್ತಿದೆ. ಕಾಳಿYಚ್ಚು ತಡೆಯಲು ಹೆಲಿಕಾಪ್ಟರ್‌ ಮೂಲಕ ನೀರು ಸಿಂಪಡಿಸುವ ಯೋಜನೆ ಇದ್ದರೂ ಕೂಡ ಅರಣ್ಯ ಇಲಾಖೆ ಸಹಿತ ಸರಕಾರದ ಬೇಜವಾಬ್ದಾರಿಯಿಂದಾಗಿ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ದುಡ್ಡು ಮಾಡುವ ಯೋಜನೆ
ಎತ್ತಿನಹೊಳೆ ದುಡ್ಡುಮಾಡುವ ಯೋಜನೆ ಯಾಗಿದೆ. ಈ ಮೂಲಕ ನದಿಮೂಲಗಳನ್ನು ನಾಶಮಾಡುವ ಕೆಲಸನಡೆಯುತ್ತಿದೆ. ಮಲೆನಾಡು, ಬಯಲು ಸೀಮೆಯ ಜನರನ್ನು ಈ ಯೋಜನೆ ಮೂಲಕ ಮರುಳು ಮಾಡಲಾಗುತ್ತಿದೆ. ಈ ಕಾಮಗಾರಿ ನಡೆಯುತ್ತಿರುವಾಗಲೇ ಜಿಲ್ಲೆಗೆ ಬರಹಿಡಿದರೆ ಮುಂದೆ ಹೇಗಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಲ್ಲೆಡೆ ವಿರೋಧ
ಎತ್ತಿನಹೊಳೆ ಯೋಜನೆಯ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು. ಅದರ ಆಗುಹೋಗುಗಳ ಬಗ್ಗೆ ಪರಮಾರ್ಶೆಯಾಗಬೇಕು. ನೀರೇ ಇಲ್ಲ ಅಂದ ಮೇಲೆ ಮಂಗಳೂರು ಸ್ಮಾರ್ಟ್‌ ಸಿಟಿಯಾಗುವುದು ಅಸಾಧ್ಯ. ಈಗಾಗಲೇ ಕರಾವಳಿ ಸಹಿತ ಮಲೆನಾಡು ಭಾಗಗಳಲ್ಲಿ ಈ ಯೋಜನೆಗೆ ವಿರೋಧವಿದೆ. ದ.ಕ., ಚಿಕ್ಕಬಳ್ಳಾಪುರದ ಸಂಸದರಿಗೆ ಈ ಬಗ್ಗೆ ಮನವಿಯನ್ನೂ ಮಾಡಲಾಗಿದೆ. ಆದರೂ ಕಾಮಗಾರಿ ನಡೆಯುತ್ತಿದೆ ಎಂದರು.

ಜಲತಜ್ಞ ಡಾ| ರಾಜೇಂದ್ರ ಸಿಂಗ್‌ ಅವರು ಕೋಲಾರ-ಚಿಕ್ಕಬಳ್ಳಾಪುರದಲ್ಲಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುಮಾರು 3700 ಕೆರೆಗಳು ಗ್ಲಾಸ್‌ ಮಾಫಿಯಾದ ಪ್ರಭಾವಕ್ಕೊಳಗಾಗಿ ಸೈಟ್‌ಗಳಾಗಿ ಪರಿವರ್ತನೆಯಾಗಿದ್ದನ್ನು ತಿಳಿಸಿದ್ದರು. ಅಲ್ಲಿರುವ ಸುಮಾರು 400 ಕೆರೆಗಳಿಗಾದರೂ ಮರುಜೀವ ನೀಡಿದ್ದರೆ ಅವರಿಗೆ ನೀರಿಗೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದರು.

ವನಮಹೋತ್ಸವ ನೆಪದಲ್ಲಿ ದುಂದುವೆಚ್ಚ
ವನಮಹೋತ್ಸವ ನೆಪದಲ್ಲಿ ವರ್ಷಂಪ್ರತಿ ದುಂದುವೆಚ್ಚ ಮಾಡಲಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ಮರಗಳ ಹನನವಾಗುತ್ತಿದೆ. ಮರಗಳನ್ನು ಕಡಿಯುವವರ ವಿರುದ್ದ ಪ್ರತಿಭಟಿಸುವ ಕೆಲಸ ಆಗಬೇಕು ಎಂದರು.

ಗೆಲ್ಲು ಕಡಿಯಲು “ಕ್ಷಮಾಪೂಜೆ’
ಬುಡಕಟ್ಟು ಜನಾಂಗದವರಿಂದ ಕಾಡಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಸಿದ್ದಿ ಜನಾಂಗದವರು ಮರದ ಒಂದು ಗೆಲ್ಲು ಕಡಿಯಬೇಕಿದ್ದರೂ ಕ್ಷಮಾ ಪೂಜೆ ಮಾಡುತ್ತಾರೆ. ಈ ಮೂಲಕ ಅವರು ಕಾಡನ್ನು ಪೂಜಿಸುವ ಕೆಲಸ ಮಾಡುತ್ತಾರೆ ಎಂದರು.

ಹೋರಾಟದಲ್ಲಿ ಹಿಂದೆ
ನೀರಿನ ವಿಚಾರಕ್ಕೆ ಬಂದರೆ ಕಾವೇರಿ, ಮಹದಾಯಿಗಳಲ್ಲಿ ರೈತರಿಂದ ಹೋರಾಟ ನಡೆಯುತ್ತದೆ. ಆದರೆ ದ.ಕ.ದಲ್ಲಿ ಅಂತಹ ಹೋರಾಟಗಳು ನಡೆಯುತ್ತಿಲ್ಲ. ಮಾಡುವವರನ್ನು ಬೆಂಬಲಿಸುತ್ತಿಲ್ಲ. ನೀರನ್ನು ಮತ್ತೂಬ್ಬರ ಮೂಲಕ ಸಾಲಕೇಳುವ ಸ್ಥಿತಿ ಇಂದು ನಗರ ಪ್ರದೇಶಗಳಲ್ಲಿ ಕಂಡುಬರುತ್ತಿದೆ ಎಂದರು.

ವರದಿಗಳ ಬಗ್ಗೆ ಅಪಪ್ರಚಾರ
ಪಶ್ಚಿಮಘಟ್ಟಗಳ ಕುರಿತು ಪ್ರಸ್ತಾವವಾಗುವ ಎಲ್ಲ ಚರ್ಚೆಗಳಲ್ಲಿ ಪ್ರೊ| ಮಾಧವ ಗಾಡ್ಗಿಲ್‌ ಹಾಗೂ ಕಸ್ತೂರಿ ರಂಗನ್‌ ವರದಿಯ ಪ್ರಸ್ತಾಪ ಮಾಡಲಾಗುತ್ತದೆ. ಆದರೆ ಕೆಲವರು ಈ ವರದಿ ಅವೈಜ್ಞಾನಿಕ ಎಂದು ಹೇಳುವ ಮೂಲಕ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಪರಿಸರಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ವಿರೋಧಿಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ
ಪಶ್ಚಿಮಘಟ್ಟ ಸುರಕ್ಷಾ ಅಭಿಯಾನದ ಮೂಲಕ ಯುವಜನರಲ್ಲಿ ಪರಿಸರ ಕಾಳಜಿ ಬೆಳೆಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಸೂಕ್ಷ್ಮತೆ ತಿಳಿಸುವ ಕೆಲಸವೂ ನಡೆಯಲಿದೆ.
-ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next