Advertisement

ಮುಂದಿನ ವಾರ ದಿನೇಶ್ ಗುಂಡೂರಾವ್ ಗೋವಾ ಭೇಟಿ : ಪಕ್ಷ ಸಂಘಟನೆ ಬಗ್ಗೆ ಸಭೆ

05:19 PM Jun 09, 2021 | Team Udayavani |

ಪಣಜಿ: ಗೋವಾ ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 8 ತಿಂಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷ ತನ್ನ ವೇಗವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಗೋವಾ ಕಾಂಗ್ರೇಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಮುಂದಿನ ವಾರ ಗೋವಾಕ್ಕೆ ಆಗಮಿಸಲಿದ್ದು ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಪರಿಶೀಲಿಸಲು ರಾಜ್ಯದ ಎಲ್ಲ 40 ವಿಧಾನಸಭಾ ಕ್ಷೇತ್ರಗಳ ಕಾಂಗ್ರೇಸ್ ಬ್ಲಾಕ್ ಸಮೀತಿಯೊಂದಿಗೆ ಸಭೆ ನಡೆಸಲಿದ್ದಾರೆ.

Advertisement

ಗೋವಾ ಕಾಂಗ್ರೇಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಗೋವಾ ರಾಜ್ಯ ಕಾಂಗ್ರೇಸ್ ಸಮನ್ವಯ ಸಮೀತಿಯೊಂದಿಗೆ ವರ್ಚುವಲ್ ಸಭೆ ನಡೆಸಿದರು. ಗೋವಾ ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಗಿರೀಶ್ ಚೋಡಣಕರ್, ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್, ಸಮನ್ವಯ ಸಮೀತಿಯ ಅಧ್ಯಕ್ಷ ರಮಾಕಾಂತ ಖಲಪ್, ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಸಮೀತಿ, ರಾಜ್ಯ ಮಟ್ಟದ ಪಕ್ಷ ಸಂಘಟನೆ ಪುನರುಜ್ಜೀವನಗೊಳಿಸಲಾಗುವುದು. ಪಕ್ಷದ ಎಲ್ಲ ಪದಾಧಿಕಾರಿಗಳ ಕಾರ್ಯಕ್ಷಮತೆ ಪರಿಶೀಲನೆ, ನಡೆಸಿ ಅಗತ್ಯ ಬದಲಾವಣೆ ಮಾಡಲಾಗುವುದು. ನಾವು ಗೋವಾದ 40 ಕ್ಷೇತ್ರಗಳತ್ತ ಗಮನಹರಿಸುತ್ತಿದ್ದೇವೆ. ರಾಜ್ಯದ ಜನರ ನಂಬಿಕೆ ಮತ್ತು ವಿಶ್ವಾಸ ಗೆಲ್ಲಲು ಶೃಮಿಸುತ್ತೇವೆ ಎಂದು ಈ ಸಭೆಯಲ್ಲಿ ದಿನೇಶ್ ಗುಂಡೂರಾವ್ ಹೇಳಿದರು.

ಅಖಿಲ ಭಾರತ ಕಾಂಗ್ರೇಸ್ ಸಮೀತಿಯ ನಿರ್ದೇಶನದಂತೆ ಜೂನ್ 11 ರಂದು ಗೋವಾ ಕಾಂಗ್ರೇಸ್ ಸಮೀತಿಯು ಇಂಧನ ಬೆಲೆ ಏರಿಕೆ ವಿರುದ್ಧ ಅಖಿಲ ಭಾರತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ. ಗೋವಾದ ಪ್ರತಿ ಕಾಂಗ್ರೇಸ್ ಬ್ಲಾಕ್ ಸಮೀತಿ ತಮ್ಮ ಕ್ಷೇತ್ರದಲ್ಲಿನ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಕಾಂಗ್ರೇಸ್ ಸಮೀತಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next