Advertisement

ಸಂಸ್ಕೃತಿ, ಆಚಾರ, ವಿಚಾರ ಬಗ್ಗೆ ಮಾತಾಡಲು ಬಿಜೆಪಿಗೆ ಯಾವ ನೈತಿಕತೆಯಿದೆ: ದಿನೇಶ್ ಗುಂಡೂರಾವ್

12:01 PM Jan 12, 2023 | Team Udayavani |

ಬೆಂಗಳೂರು: ತಲೆ ಮರೆಸಿಕೊಂಡಿರುವ ಸ್ಯಾಂಟ್ರೋ ರವಿ ವಿಚಾರದಲ್ಲಿ ರಾಜಕೀಯ ಆರೋಪ- ಪ್ರತ್ಯಾರೋಪಗಳು ನಡೆಯುತ್ತಿದೆ. ಇದೀಗ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಸಂಸ್ಕೃತಿ, ಆಚಾರ, ವಿಚಾರ ಬಗ್ಗೆ ಮಾತಾಡಲು ಬಿಜೆಪಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ.

Advertisement

ನಾನು ಬಿಜೆಪಿ ಕಾರ್ಯಕರ್ತ ಎಂದು ಸ್ಯಾಂಟ್ರೋ ರವಿಯೇ ಹೇಳಿಕೊಂಡಿದ್ದಾನೆ. ಇಂತಹ ತಲೆಹಿಡುಕರು ಬಿಜೆಪಿಯಲ್ಲಿ ಮಾತ್ರ ಇರಲು ಸಾಧ್ಯ. ಲಂಪಟರು, ನುಂಗುಬಾಕರು, ಲಂಚ-ಮಂಚ ಪ್ರಹಸನ ಶೂರರಿಂದ ಬಿಜೆಪಿ ತುಂಬಿ ತುಳುಕುತ್ತಿದೆ. ಇಂತಹ ಭಂಡ ಬಿಜೆಪಿಯವರಿಗೆ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ ಎಂದು ದಿನೇಶ್ ಟ್ವೀಟ್ ಮಾಡಿದ್ದಾರೆ.

ಸ್ಯಾಂಟ್ರೋ ರವಿಯಂತಹ ಪಿಂಪ್‌ ಬಿಜೆಪಿ ಕಾರ್ಯಕರ್ತ, ಮತ್ತೊಂದು ಕಡೆ‌ ನಟೋರಿಯಸ್ ರೌಡಿ‌ ಶೀಟರ್‌ಗಳನ್ನು, ಪೋಲಿ‌ ಪುಡಾರಿಗಳನ್ನು ಬಿಜೆಪಿಯವರೇ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.  ಬಿಜೆಪಿ ಯವರು ನೈತಿಕತೆಯ ಬಗ್ಗೆ‌ ನೀತಿ ಪಾಠ ಮಾಡುವುದು ದೆವ್ವದ ಬಾಯಲ್ಲಿ ಸುಪ್ರಭಾತ ಕೇಳಿದಂತೆ. ಬಿಜೆಪಿಗೆ ಜನ ‘ಬ್ಲ್ಯೂ’ಜೆಪಿ ಎನ್ನುವುದು ಇದೇ ಕಾರಣಕ್ಕಾಗಿಯೇ? ಸ್ಯಾಂಟ್ರೋ ರವಿ ವಿರುದ್ಧ ಎಫ್ಐಆರ್ ದಾಖಲಾಗಿ ಹತ್ತು ದಿನಗಳಾಗಿವೆ. ಇಷ್ಟಾದರೂ ಸ್ಯಾಂಟ್ರೋ ರವಿಯ ಬಂಧನವಾಗಿಲ್ಲ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಆತನ ಬಂಧನವಾಗುತ್ತಿಲ್ಲವೇ ಅಥವಾ ಕೆಲ ಬಿಜೆಪಿಯವರಿಗೆ ಅವನು ಸಲ್ಲಿಸಿದ ‘ಸೇವೆ’ಯ ಕೃತಾಜ್ಞಾರ್ಥವಾಗಿ ಬಂಧನದಿಂದ ಆತನ ರಕ್ಷಣೆ ಮಾಡಲಾಗುತ್ತಿದೆಯೇ? ಸ್ಯಾಂಟ್ರೋ ರವಿ ಬಂಧನ ಯಾವಾಗ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next