ಕನ್ನಡದಲ್ಲಿ “ಸುಪ್ರಭಾತ’, “ಲಾಲಿ’, “ಅಮೃತವರ್ಷಿಣಿ’, “ಹೆಂಡ್ತಿಗೇಳ್ಬೇಡಿ’, “ನಿಶ್ಯಬ್ಧ’, “ಚಿತ್ರ’ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಹಿರಿಯ ನಿರ್ದೇಶಕ ದಿನೇಶ್ ಬಾಬು ಈಗ “ಹಾಫ್ ಸೆಂಚುರಿ’ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣವಾಗಿರುವುದು “ಕಸ್ತೂರಿ ಮಹಲ್’ ಚಿತ್ರ.
ತಮ್ಮ 50ನೇ ಚಿತ್ರದ ಬಗ್ಗೆ ಮಾತನಾಡುವ ದಿನೇಶ್ ಬಾಬು, “ಇಲ್ಲಿಯವರೆಗೆ ಮಾಡಿದ ಪ್ರತಿ ಸಿನಿಮಾವನ್ನೂ ನನ್ನ ಫಸ್ಟ್ ಸಿನಿಮಾ ಅಂಥ ಅಂದುಕೊಂಡೇ ಮಾಡಿದ್ದೇನೆ. “ಕಸ್ತೂರಿ ಮಹಲ್’ ಸಿನಿಮಾವನ್ನೂ ಅದೇ ಶ್ರದ್ಧೆ – ಭಯ ಇಟ್ಟುಕೊಂಡು ಮಾಡಿದ್ದೇನೆ. ನಿಜ ಹೇಳ್ಬೇಕು ಅಂದ್ರೆ ಈ ಸಿನಿಮಾ ಶುರು ಮಾಡಿದ ಮೇಲೆಯೇ ಇದು ನನ್ನ 50ನೇ ಡೈರೆಕ್ಷನ್ ಸಿನಿಮಾ ಅಂಥ ಗೊತ್ತಾಗಿದ್ದು. ಇಲ್ಲಿಯವರೆಗೆ ಕನ್ನಡದಲ್ಲಿ 44 ಸಿನಿಮಾ ಡೈರೆಕ್ಷನ್ ಮಾಡಿದ್ದೇನೆ. ಬೇರೆ ಭಾಷೆಯಲ್ಲಿ 5 ಸಿನಿಮಾ ಡೈರೆಕ್ಷನ್ ಮಾಡಿದ್ದೇನೆ. ಕನ್ನಡದಲ್ಲಿ ಇದು ನನ್ನ 45ನೇ ಡೈರೆಕ್ಷನ್ ಸಿನಿಮಾ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಇದು 50ನೇ ಸಿನಿಮಾ ಅಂಥ ಲೆಕ್ಕಕ್ಕೆ ಸಿಕ್ತು’ ಎನ್ನುತ್ತಾರೆ.
“ನಾನು ಇಲ್ಲಿಯವರೆಗೆ ಮಾಡಿದ ಬಹುತೇಕ ಸಿನಿಮಾಗಳು, ನಾನು ಕಣ್ಣಾರೆ ಕಂಡ ಅಥವಾ ಕೇಳಿದ, ನನ್ನನ್ನು ಆಗಾಗ್ಗೆ ಕಾಡಿದ ಕೆಲವೊಂದು ವಿಷಯಗಳೇ ಆಗಿವೆ. “ಕಸ್ತೂರಿ ಮಹಲ್’ ಕೂಡ ಸಬ್ಜೆಕ್ಟ್ ಕೂಡ ಅಂಥದ್ದೇ ಒಂದು. ಕೆಲ ಸಮಯದಿಂದ ನನ್ನ ಮನಸ್ಸಿನಲ್ಲಿ ಕಾಡುತ್ತಿದ್ದ ಹಾರರ್-ಥ್ರಿಲ್ಲರ್ ಸಬೆjಕ್ಟ್ ಇದು. ಅದನ್ನೇ ಇಟ್ಟುಕೊಂಡು, ಅದಕ್ಕೊಂದಷ್ಟು ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿ ನನ್ನದೇ ಸ್ಟೈಲ್‌ನಲ್ಲಿ “ಕಸ್ತೂರಿ ಮಹಲ್’ ಸಿನಿಮಾವನ್ನ ಸ್ಕ್ರೀನ್ ಮೇಲೆ ಪ್ರಸೆಂಟ್ ಮಾಡಿದ್ದೇನೆ. ನನ್ನ ಹಿಂದಿನ ಸಿನಿಮಾಗಳಿಗಿಂತ, “ಕಸ್ತೂರಿ ಮಹಲ್’ನಲ್ಲಿ ಬೇರೆಯದ್ದೇ ಆದ ಒಂದಷ್ಟು ಹೊಸ ವಿಷಯಗಳನ್ನು ಹೇಳ್ಳೋಕೆ ಟ್ರೈ ಮಾಡಿದ್ದೀನಿ. ಇದರಲ್ಲಿ ಸಸ್ಪೆನ್ಸ್, ಹಾರರ್, ಥ್ರಿಲ್ಲರ್, ಕಾಮಿಡಿ ಹೀಗೆ ಕಂಪ್ಲೀಟ್ ಎಂಟರ್ ಟೈನ್ಮೆಂಟ್ ಇದೆ’ ಎನ್ನುವುದು ದಿನೇಶ್ ಬಾಬು ಮಾತು.
ಇದನ್ನೂ ಓದಿ: ನಾನು ಚಿಕ್ಕಂದಿನಿಂದಲೂ ಕಾಪು ಮಾರಿಯಮ್ಮ ದೇವಿಯ ಭಕ್ತೆ : ಬಹುಭಾಷಾ ನಟಿ ಪೂಜಾ ಹೆಗ್ಡೆ
ಇದು ಕಸ್ತೂರಿ ಎನ್ನುವ ಹುಡುಗಿಯೊಬ್ಬಳು ಇರುವ ಮನೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಸಿನಿಮಾ. ಹಾಗಾಗಿ ಇದಕ್ಕೆ “ಕಸ್ತೂರಿ ಮಹಲ್’ ಅಂಥ ಟೈಟಲ್ ಇಡಲಾಗಿದೆಯಂತೆ. ಇನ್ನು ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಲೀಡ್‌ನಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಸ್ಕಂದ ಅಶೋಕ್, ರಂಗಾಯಣ ರಘು, ಶ್ರುತಿ ಪ್ರಕಾಶ್ ಮೊದಲಾದವರ ತಾರಾಗಣವಿದೆ. “ಶ್ರೀ ಭವಾನಿ ಆರ್ಟ್ಸ್’ ಬ್ಯಾನರ್‌ನಲ್ಲಿ ರವೀಶ್ ಆರ್. ಸಿ ಈ ಸಿನಿಮಾವನ್ನ ನಿರ್ಮಿಸಿದ್ದಾರೆ. ಅಂದಹಾಗೆ, ಇದೇ ಮೇ. 13ಕ್ಕೆ ದಿನೇಶ್ ಬಾಬು 50ನೇ ಚಿತ್ರ “ಕಸ್ತೂರಿ ಮಹಲ್’ ತೆರೆ ಕಾಣುತ್ತಿದೆ.