Advertisement
ಧರಣಿ ಉದ್ದೇಶಿಸಿ ಜೋಗಿಪುರ ನಂದನ್ ಮಾತನಾಡಿ, ಗ್ರಾಮ ಪಂಚಾಯಿತಿ ಬಾಗಿಲು ತೆರೆಯುವ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ, ಬೆಳಗ್ಗೆ 12 ಗಂಟೆಗೆ ಕಚೇರಿಗೆ ಆಗಮಿಸಿದ್ದೇನೆ. ಸಂಜೆ 4 ಗಂಟೆಯಾದರು ಇತ್ತು ಅಧಿಕಾರಿಗಳು ಸುಳಿದಿಲ್ಲ, ಇನ್ನು ಸಿಬ್ಬಂದಿಗಳು ಕಚೇರಿ ಯಲ್ಲಿ ಕುಳಿತ್ತಿಲ್ಲ ಎಂದು ಆಪಾದನೆ ಮಾಡಿದರು.
Related Articles
Advertisement
ಸಮಸ್ಯೆ ಆಲಿಸುವ ಸೌಜನ್ಯವಿಲ್ಲ: ಕಚೇರಿಯಲ್ಲಿ ನೀರುಘಟಿ, ಡಿಗ್ರೂಪ್ ನೌಕರರು ಕುಳಿತುಕೊಂಡು ಕಚೇರಿಗೆ ಆಗಮಿಸುವ ಜನರ ಸಮಸ್ಯೆ ಆಲಿಸುವ ಸೌಜನ್ಯ ಬೆಳೆಸಿಕೊಂಡಿಲ್ಲ, ಚನ್ನರಾಯಟಪಟ್ಟಣಕ್ಕೆ ಕೇಲವ ಎರಡು ಕೀಮಿ ಸಮೀಪದಲ್ಲಿ ದಿಂಡಗೂರು ಗ್ರಾಮ ಪಂಚಾಯಿತಿ ಇದೆ ಇಂತಹ ಗ್ರಾಪಂಗಳ ಗತಿ ಈ ರೀತಿಯಾದರೆ ಇನ್ನು ಗಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಮಸ್ಯೆ ಎಷ್ಟು ಇದೆ ಎನ್ನುವುದನ್ನು ಜಿಲ್ಲಾಧಿ ಕಾರಿಗಳು ಅರಿಯಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಹಣ ಪೋಲು: ಗ್ರಾಮ ಪಂಚಾಯಿತಿ ಸದಸ್ಯ ಮಂಜೇಗೌಡ ಮಾತನಾಡಿ, ಸ್ವತ್ಛ ಭಾರತ್ ವಿಷನ್ ಮೂಲಕ ಮೂರು ಲಕ್ಷ ರೂ.ವೆಚ್ಚ ಮಾಡಿ ಕಸ ಸಂಗ್ರಹ ಮಾಡಲು ಆಟೋ ಖರೀದಿಸಲಾಗಿದೆ. ಒಂದು ದಿವಸವೂ ರಸ್ತೆಯಲ್ಲಿ ಆಟೋ ಸಂಚಾರ ಮಾಡಿಲ್ಲ, ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ, ಅಧಿಕಾರಿಗಳ ನಿರ್ಲಕ್ಷಕ್ಕೆ ಜನರ ಹಣ ಮಣ್ಣು ಪಾಲು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ತಾಪಂ ಇಒ ರಾಜೀನಾಮೆ ನೀಡಲಿ : ತಾಲೂಕು ಪಂಚಾಯಿತಿ ಇಒ ಸುನಿಲ್ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳಿಂದ ಸರಿಯಾಗಿ ಕೆಲಸ ಮಾಡಿಸಲು ಸಾಧ್ಯವಾಗದೆ ಇದ್ದರೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಇಲ್ಲವೆ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು, ಬದಲಾಗಿ ಸಾರ್ವಜನಿಕರಿಗೆ ಉಡಾಫೆ ಉತ್ತರ ನೀಡುವುದು ಎಷ್ಟು ಸರಿ? ಸರ್ಕಾರ ವೇತನ ನೀಡುವುದು ಜನರಿ ಸಮಸ್ಯೆ ಬಗೆ ಹರಿಸಲೆಂದು ಆದರೆ ಇವರು ಜನರನ್ನು ಮನೆ ಕೆಲಸದವರ ರೀತಿ ಮಾತನಾಡಿಸುತ್ತಾರೆ ಎಂದು ಜೋಗಿಪುರ ನಂದನ್ ಆಪಾದನೆ ಮಾಡಿದರು.
15ನೇ ಹಣಕಾಸಿನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ್ದೇನೆ. ಕಳೆದ ಒಂದು ತಿಂಗಳಿನಿಂದ ಮಾಹಿತಿ ನೀಡುತ್ತಿಲ್ಲ, ತಾಪಂ ಇಒ ಸುನಿಲ್ ಭೇಟಿ ಮಾಡಿದರೆ ಗ್ರಾಪಂ ಅಡಳಿತ ಮಂಡಳಿಯೇ ಸುಪ್ರೀಂ. ಇದಕ್ಕೂ ನನಗೂ ಸಂಬಂಧವಿಲ್ಲ ಅಂತಾರೆ. – ಚೇನತ್, ಆರ್‌ಟಿಐ ಕಾರ್ಯಕರ್ತ