Advertisement

“ಚಿನ್ನಮ್ಮ’ನನ್ನು ಜೈಲಿನಲ್ಲಿ ಭೇಟಿಯಾದ ದಿನಕರನ್‌

08:05 AM Aug 19, 2017 | |

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಡಿಎಂಕೆ ( ಅಮ್ಮಾ
ಬಣ) ಪ್ರಧಾನ ಕಾರ್ಯದರ್ಶಿ ವಿ. ಶಶಿಕಲಾರನ್ನು ಅವರ ಸಂಬಂಧಿ ಟಿಟಿವಿ ದಿನಕರನ್‌ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು. 

Advertisement

ಶುಕ್ರವಾರ ಮಧ್ಯಾಹ್ನ 12-50ರ ಸುಮಾರಿಗೆ ಜೈಲಿಗೆ ಆಗಮಿಸಿದ ದಿನಕರನ್‌, ಮೂರ್‍ನಾಲ್ಕು ಮಂದಿ ಬೆಂಬಲಿಗರು ಜೈಲಿನ ನಿಯಮಾವಳಿಯಂತೆ 45 ನಿಮಿಷ ಶಶಿಕಲಾರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಆದೇಶಿಸಿರುವುದು, ಮಾಜಿ ಸಿಎಂ ಪನ್ನೀರ ಸೆಲ್ವಂ ಹಾಗೂ ಎಐಡಿಎಂಕೆ ಬಣ ವಿಲೀನವಾಗುತ್ತಿರುವ ವಿದ್ಯಮಾನಗಳ ಬಗ್ಗೆ ದಿನಕರನ್‌ ಹಾಗೂ ಅವರ ಬೆಂಬಲಿಗರು ಶಶಿಕಲಾರನ್ನು ಭೇಟಿಯಾಗಿರುವುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಶಶಿಕಲಾ ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದಿನಕರನ್‌, ತಮಿಳುನಾಡಿನ ಜನತೆಗೆ ಓಪಿಎಸ್‌ ಹಾಗೂ ಎಐಡಿಎಂಕೆ ಬಣ ವಿಲೀನವಾಗುತ್ತಿರುವುದು ಇಷ್ಟವಿಲ್ಲ. ಜನರ ಆಶೋತ್ತರಗಳಿಗೆ ವಿರುದಟಛಿವಾಗಿ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಮಾಜಿ ಸಿಎಂ ಜಯಲಲಿತಾರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ, ತನಿಖೆ ಬಳಿಕ ಶಶಿಕಲಾ ನಿರ್ದೋಷಿ ಎಂದು ಸಾಬೀತಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next